ಬಂಗಾಡಿ ರವಿರಾಜ ಬಳ್ಳಾಲ್ ಅವರ ನಿಧನಕ್ಕೆ ಹೆಗ್ಗಡೆ ಸಂತಾಪ
Friday, January 16, 2026
ಉಜಿರೆ: ಬಂಗಾಡಿ ರವಿರಾಜ ಬಳ್ಳಾಲ್ ಅವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
ರವಿರಾಜ ಬಳ್ಳಾಲ್ ಧರ್ಮಾನುರಾಗಿಗಳಾಗಿದ್ದು, ಬಂಗಾಡಿ ಬಸದಿಯನ್ನೇ ಅತಿಶಯಕ್ಷೇತ್ರವಾಗಿ ಬೆಳೆಸಿದರು. ಸದಾ ಸ್ವಾಧ್ಯಾಯ ನಿರತರಾಗಿದ್ದ ಅವರು ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಸಾಧನೆ ಬಗ್ಯೆ ಚಿಂತನ-ಮಂಥನ ನಡೆಸುತ್ತಿದ್ದರು.
ಬಂಗಾಡಿಯಲ್ಲಿ ಹಲವಾರು ಧರ್ಮಪ್ರಭಾವನಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಕೃಷಿ, ತೋಟಗಾರಿಕೆಯಲ್ಲಿಯೂ ಅವರಿಗೆ ವಿಶೇಷ ಆಸಕ್ತಿ-ಅನುಭವ ಇತ್ತು.
ಧರ್ಮಸ್ಥಳದ ಪರಮ ಭಕ್ತರೂ, ಅಭಿಮಾನಿಯೂ ಆಗಿದ್ದ ಅವರು ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆ ಬಗ್ಗೆ ಅವರು ಅಮೂಲ್ಯ ಕೃತಿಯೊಂದನ್ನೂ ರಚಿಸಿದ್ದರು.