ಸೂರಿಕುಮೇರ್ ಹೆದ್ದಾರಿಯಲ್ಲಿ ಕ್ರಾಸಿಂಗ್ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ
Friday, January 16, 2026
ಬಂಟ್ವಾಳ: ಸೂರಿಕುಮೇರ್ ಹೆದ್ದಾರಿಯಲ್ಲಿ ಕ್ರಾಸಿಂಗ್ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯರು ಶುಕ್ರವಾರದಂದು ಸೂರಿಕುಮೇರ್ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾತನಾಡಿ, ಸೂರಿಕುಮೇರ್ ಜಂಕ್ಷನ್‌ನ ಸ್ವಲ್ಪ ಹಿಂದಕ್ಕೆ ಇಲ್ಲವೆ ಮುಂದೆ ಕ್ರಾಸಿಂಗ್ ನೀಡಬೇಕು. ಹೆದ್ದಾರಿ ಇಲಾಖೆ ಈ ವಿಚಾರದಲ್ಲಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಯೇ ಅಹೋರಾತ್ರಿ ಪ್ರತಿಭಟನೆ ನಡೆಸಲಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ರೆಸಿಡೆನ್ಸಿಯಲ್ ಇಂಜಿನಿಯರ್ ಬಿನೋದ್ ಮಾತನಾಡಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೆದ್ದಾರಿಯ ಸಹಾಯಕ ಇಂಜಿನಿಯರ್ ಚಿದಾನಂದ, ಮಾಣಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ, ಸದಸ್ಯ ಮೆಲ್ವಿನ್ ಮಾರ್ಟಿಸ್, ಬ್ಯಾರಿ ಅಕಾಡೆಮಿ ರಾಜ್ಯ ಸದಸ್ಯ ಸಲೀಂ ಬರಿಮಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.