ವಾಲ್ಪಾಡಿ ಟ್ರೋಫಿ: ಪುತ್ತಿಗೆ ತಂಡ ಚಾಂಪಿಯನ್, ಸಾಧಕರಿಗೆ ಸನ್ಮಾನ

ವಾಲ್ಪಾಡಿ ಟ್ರೋಫಿ: ಪುತ್ತಿಗೆ ತಂಡ ಚಾಂಪಿಯನ್, ಸಾಧಕರಿಗೆ ಸನ್ಮಾನ

ಸ್ವರಾಜ್ಯ ಮೈದಾನದಲ್ಲಿ ವೇದಿಕೆ ನಿರ್ಮಾಣಕ್ಕೆ ಬೇಡಿಕೆ


ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಬೆದ್ರ ಕ್ರಿಕೆಟ್ ಯೂನಿಯನ್ ನ ಹತ್ತು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.

ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ ವಿಕ್ರೀತಾ,ಕರಾಟೆ ಸಾಧಕ ಮುಹಮ್ಮದ್ ನದೀಮ್ ಹಾಗೂ ಹಾಕಿಯಲ್ಲಿ ಸಾಧನೆ ಮಾಡಿದ ಜಾಸ್ಮಿನ್ ಮರಿಯಾ ಅವರನ್ನು ಈ‌ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು ಹಾಗೂ ಕ್ರಿಕೆಟ್ ಪ್ರೋತ್ಸಾಹಕ ಪೂರ್ಣೇಶ್ ಅವರನ್ನು ಗೌರವಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡರಾದ ಕೆ.ಪಿ. ಜಗದೀಶ್ ಅಧಿಕಾರಿ, ಸುದರ್ಶನ ಎಂ, ಅಶ್ವಥ್ ಕೆ.ಪಣಪಿಲ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಉದ್ಯಮಿ ಕೆ.ಶ್ರೀಪತಿ ಭಟ್, ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಶ್ರೀ ಕಟಿಲೇಶ್ವರಿ ಕನ್ಸ್ಟ್ರಕ್ಷನ್ಸ್ ನ ಮಾಲಕ ನಾಗೇಶ್ ಬಂಗೇರ ಅಳಿಯೂರು,ವಿನೋಭ್ ಜೈನ್,ಮೊಬೈಲ್ ಶಾಪ್ ಮಾಲಕರ ಸಂಘದ ಅಧ್ಯಕ್ಷ ಸಫ್ವಾನ್, ಪುತ್ತಿಗೆ ತಂಡದ ಮಾಲಕ ಮನೋಜ್,ಗುಂಡುಕಲ್ಲು ತಂಡದ ಮಾಲಕ ರಝಾಕ್,ಬೆದ್ರ ಕ್ರಿಕೆಟ್ ಯೂನಿಯನ್ ಕಾರ್ಯದರ್ಶಿ ವಿಶಾಲ್ ತೋಡಾರ್, ದಿನೇಶ್ ಪೂಜಾರಿ ಮೂಡುಬಿದಿರೆ, ಕೃಷ್ಣೇ ಗೌಡ,ಅಲ್ತಾಫ್ ಮೂಡುಬಿದಿರೆ ಮತ್ತಿತರರು ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.

 ಪುತ್ತಿಗೆ ತಂಡ ಚಾಂಪಿಯನ್:

ಮೂರು ದಿವಸಗಳಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ಎಫ್.ಸಿ.ಟಿ. ಪುತ್ತಿಗೆ ತಂಡವು ಚಾಂಪಿಯನ್ ಆದರೆ ಎಲೈಟ್ ಗುಂಡುಕಲ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ‌ಶ್ರೀದೇವಿ ಕೊಡ್ಯಡ್ಕ ತೃತೀಯ ಹಾಗೂ ಸಾರಾ ಫ್ರೆಂಡ್ಸ್ ತಂಡವು ನಾಲ್ಕನೇ ಸ್ಥಾನ ಪಡೆಯಿತು.

ಗುಂಡುಕಲ್ ತಂಡದ ಇಮ್ರಾನ್ ಸರಣಿಶ್ರೇಷ್ಠ, ಉನೈಝ್ ಉತ್ತಮ ಕ್ಷೇತ್ರ ರಕ್ಷಕ, ಪುತ್ತಿಗೆ ತಂಡದ ಸಿರಾಜ್ ಉತ್ತಮ ಎಸೆತಗಾರ, ನಿಝಾಮ್ ಪಂದ್ಯಶ್ರೇಷ್ಠ ಹಾಗೂ ಸಾರಾ ತಂಡದ ಇರ್ಫಾನ್ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.

ಫ್ರೆಂಡ್ಸ್ ವಾಲ್ಪಾಡಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು.‌ ಆಕಾಶ್ ಕೊಕ್ರಾಡಿ ಕಾರ್ಯಕ್ರಮ‌ ನಿರೂಪಿಸಿ ರಶೀದ್ ವಾಲ್ಪಾಡಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article