ಮೂಡುಬಿದಿರೆ-ಅಲಂಗಾರು ಶ್ರೀ ಅಯ್ಯ ಸ್ವಾಮಿ ಮಠದಲ್ಲಿ ಶ್ರೀ ಗುರು ಆರಾಧನೆ
ಬೆಳಗ್ಗೆ ಶ್ರೀ ಮಠದಿಂದ ಪಾದುಕೆಗಳ ಸಹಿತ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂದರ್ಶನವಿತ್ತು ಪೂಜೆ ನೆರವೇರಿಸಿ ಮಠಕ್ಕೆ ಪುನರಾಗಮನವಾಗಿ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು.
ಮಠದ ವ್ಯವಸ್ಥಾಪಕ ಪುರೋಹಿತ ಬಿ. ವಿಶ್ವನಾಥ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತಮಂಡಳಿ, ಶ್ರೀ ಮಠದ ಪ್ರಮುಖರಾಗಿದ್ದ ದಿ. ಬಿ.ಎಸ್. ರುದ್ರಯ್ಯ ಪುರೋಹಿತರ ಶಿಷ್ಯವರ್ಗದವರ ಸಹಿತ ವೈದಿಕವೃಂದದವರು ಪಾಲ್ಗೊಂಡಿದ್ದರು.
ಮಠದ ಜೀರ್ಣೋದ್ಧಾರದ ಬಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ಶಿಲ್ಪ ದರ್ಶಕ ತಾಳಮದ್ದಳೆ ಏರ್ಪಡಿಸಲಾಗಿತ್ತು.
ಕಲಾವಿದರಾಗಿ ಡಿ.ಕೆ. ಆಚಾರ್ಯ ಅಲಂಕಾರು (ಭಾಗವತರು), ಶ್ರಾವ್ಯಾ ತಳಕಳ, ಶಮಾ ತಳಕಳ, ಪೂಜಾ ಶಿರ್ತಾಡಿ (ಚೆಂಡೆ, ಮದ್ದಳೆ, ಚಕ್ರತಾಳ), ಅರ್ಥಧಾರಿಗಳಾಗಿ ಜಬ್ಬಾರ್ ಸಮೋ, ಸತೀಶ ಆಚಾರ್ಯ ಮಾಣಿ, ದಿವಾಕರ ಗೇರುಕಟ್ಟೆ, ಹರೀಶ್ ಬಾರ್ಯ ಸಹಕರಿಸಿದ್ದರು.
ಜಿ.ಎಸ್.ಪುರಂದರ ಪುರೋಹಿತರು ಕಾಯ೯ಕ್ರಮ ನಿರೂಪಿಸಿದರು.