ಪಡುಮಾನಾ೯ಡಿನಲ್ಲಿ ಮಕ್ಕಳ ಗ್ರಾಮಸಭೆ
Tuesday, January 27, 2026
ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಮಾರ್ನಾಡು ಮತ್ತು ಮೂಡುಮಾರ್ನಾಡು ಗ್ರಾಮದ ಮಕ್ಕಳ ಗ್ರಾಮ ಸಭೆಯು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ವಿದ್ಯಾಥಿ೯ನಿ ಸಿಂಚನ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬನ್ನಡ್ಕದಲ್ಲಿರುವ ಗೂಡಂಗಡಿಯಲ್ಲಿ ಗುಟ್ಕಾ ಮಾರಾಟ ಮಾಡುತ್ತಿದ್ದು ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು, ತಂಡ್ರಕೆರೆ ಬಳಿ ರಸ್ತೆಗೆ ವೇಗ ತಡೆಯನ್ನು ನಿಮಿ೯ಸಬೇಕೆಂದು ಮತ್ತು ಮೂಡುಮಾನಾ೯ಡು ಪ್ರೌಢಶಾಲೆ ಬಳಿ ಬೀದಿ ದೀಪ ಅಳವಡಿಸಬೇಕೆಂದು ವಿದ್ಯಾಥಿ೯ಗಳು ಸಭೆಯಲ್ಲಿ ಆಗ್ರಹಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಆರ್. ಪುತ್ರನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗಾಗಿ ಸರಕಾರ ಎಷ್ಟೋ ಹಣ ವಿನಿಯೋಗಿಸುತ್ತಿದೆ ಅದರ ಪ್ರಯೋಜನ ಪಡೆಯದೇ ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.
ಸಾಧಕ ವಿದ್ಯಾಥಿ೯ನಿಗೆ ಸನ್ಮಾನ:
ರಾಷ್ಟ್ರಮಟ್ಟದಲ್ಲಿ ನೆಟ್ ಬಾಲ್ ಹಾಗೂ ಫ್ಲೋರ್ ಬಾಲ್ ಪಂದ್ಯಾಟದಲ್ಲಿ ಸಾಧನೆ ಮಾಡಿದ ನಿರ್ಮಲ ಕಾಮತ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ, ಆರೋಗ್ಯ ಇಲಾಖೆ ಸಿಬ್ಬಂದಿ ಸಂತೋಷ್, ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಹಾಗೂ ಅರುಣಾ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.
ಪಂಚಾಯತ್ ಸಿಬಂದಿ ರಾಜು ಸ್ವಾಗತಿಸಿದರು. ಪಿಡಿಒ ಸಾಯೀಶ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ವತಿಯಿಂದ ಏಪ೯ಡಿಸಿದ್ದ ವಿವಿಧ ಸ್ಪಧೆ೯ಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಗ್ರಾಮಸಭೆಯ ಸಂದಭ೯ ನಡೆಸಿದ ಕ್ವಿಜ್ ಸ್ಪಧಾ೯ ವಿಜೇತರಿಗೂ ಬಹುಮಾನ ನೀಡಲಾಯಿತು. ಕಿಶೋರ್ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಕು.ವನಿತಾ ವಂದಿಸಿದರು.



