ಮಾನಭಂಗಕ್ಕೆ ಯತ್ನ: ಆರೋಪಿಗೆ ಮೂರು ವರ್ಷ ಶಿಕ್ಷೆ, 10,500 ರೂ ದಂಡ

ಮಾನಭಂಗಕ್ಕೆ ಯತ್ನ: ಆರೋಪಿಗೆ ಮೂರು ವರ್ಷ ಶಿಕ್ಷೆ, 10,500 ರೂ ದಂಡ

ಮುಲ್ಕಿ: ಮಹಿಳೆಯೊಬ್ಬರು ಚಪ್ಪಲಿ ಖರೀದಿಗೆ ಅಂಗಡಿಗೆ ತೆರಳಿದ್ದು, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಮಾನಭಂಗಕ್ಕೆ ಎತ್ನಿಸಿದ ಆರೋಪಿ ಸಂಶುದ್ದೀನ್ ಎಂಬಾತನನ್ನು ದೋರ್ಷಿ ಎಂದು ಮಾಡುಬಿದರೆ ಹಿರಿಯ ಸಿಜೆ ಮತ್ತು ಜೆಎಂಎಪ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಧುಕರ ಪಿ. ಬಾಗವತ್ ಅವರು ಜ.6 ರಂದು ತೀರ್ಪು ನೀಡಿ, ಮೂರು ವರ್ಷ ಶಿಕ್ಷೆ ಹಾಗೂ 10,500 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಘಟನೆಯ ವಿವರ:

ಮಹಿಳೆಯೊಬ್ಬರು 12/12/2021 ರಲ್ಲಿ ಚಪ್ಪಲಿ ಖರೀದಿಸುವರೇ ಕಿನ್ನಿಗೋಳಿಯ ಶೂ ಫ್ಯಾಶನ್ ಅಂಗಡಿಗೆ ಹೋಗಿ ಚಪ್ಪಲಿ ಖರೀದಿಸುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.20ರ ವೇಳೆಗೆ ಅಂಗಡಿಯ ಮಾಲಕ ಸಂಶುದ್ದೀನ್ ಎಂಬಾತನು ಚಪ್ಪಲಿ ತೋರಿಸುವ ನೆಪದಲ್ಲಿ ಅಂಗಡಿಯೋಳಗಿನ ಕಂಪಾರ್ಟ್‌ಮೆಂಟ್ ಒಳಗೆ ಮಹಿಳೆಯನ್ನು ಬರಮಾಡಿಸಿ ಆರೋಪಿಯು ಮಹಿಳೆಯ ಭುಜವನ್ನು ಮುಟ್ಟಿ, ಎದೆಗೆ ಕೈಹಾಕಿ ಮಾನಭಂಗವನ್ನು ಉಂಟುಮಾಡಿದ್ದಲ್ಲದೇ ಮಹಿಳೆಯ ಬಟ್ಟೆಯನ್ನು ತೆಗೆಯಲು ಒತ್ತಾಯ ಪಡಿಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ನೊಂದ ಮಹಿಳೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ: 136/2021 ಕಲಂ:342,354(ಎ),354(ಬಿ) ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಅಂದಿನ ಪೊಲೀಸ್ ನಿರೀಕ್ಷಕ ಕೆ. ಕುಸುಮಾಧರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿನಾಯಕ ತೊರಗಲ್ ಅವರು ಅರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದು, ಅರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. 

ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಪಿಎಸ್‌ಐ ವಿನಾಯಕ ತೊರಗಲ್ ಅವರು ಅರೋಪಿಗಳ ವಿರುದ್ಧ ತನಿಖೆಯನ್ನು ನಡೆಸಿ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು ಎಎಸ್‌ಐ ಸಂಜೀವ ಎ.ಪಿ. ಅವರು ತನಿಖೆಗೆ ಸಹಕರಿಸಿರುತ್ತಾರೆ ಸರಕಾರಿ ಅಭಿಯೋಜಕರಾದ ನೇತ್ರಾವತಿ ಕೋಟ್ಯಾನ್ ಅವರು ಸರ್ಕಾರದ ಪರವಾಗಿ ವಾದವನ್ನು ಮಂಡಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article