ಗಾಂಜಾ ಮಾರುತ್ತಿದ್ದವನ ಬಂಧನ: ಗಾಂಜಾ ವಶಕ್ಕೆ

ಗಾಂಜಾ ಮಾರುತ್ತಿದ್ದವನ ಬಂಧನ: ಗಾಂಜಾ ವಶಕ್ಕೆ

ಪುತ್ತೂರು: ಅಕ್ರಮವಾಗಿ ಪುತ್ತೂರಿನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದು, 400 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪುತ್ತೂರು ಕಸಬಾ ಗ್ರಾಮ ನಿವಾಸಿ ಮಹಮ್ಮದ್ ತೌಸೀಫ್ (36) ಎಂದು ಗುರುತಿಸಲಾಗಿದೆ.

ಘಟನೆಯ ವಿವರ:

ಜ.1 ರಂದು ಬೆಳಗ್ಗೆ ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಜಂಕ್ಷನ್ ಎಂಬಲ್ಲಿ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ನಗರ ಠಾಣಾ ಪಿಎಸ್‌ಐ ಜನಾರ್ಧನ ಕೆ.ಎಂ. ಅವರು ಸಿಬ್ವಂದಿಗಳೊಂದಿಗೆ ಆ ಸ್ಥಳಕ್ಕೆ ತೆರಳಿ, ಆತನನ್ನು ತಡೆದು ವಿಚಾರಿಸಿದಾಗ ಗಾಂಜಾ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2026, ಕಲಂ:8(ಸಿ), 20(ಬಿ) ಎನ್‌ಡಿಪಿಎಸ್ ಆಕ್ಟ್ 1985 ರಂತೆ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article