ಭಾರತ ಸೇವಾದಳ ವತಿಯಿಂದ ಸೇವಾದಳ ಸಪ್ತಾಹದ ಸಮಾರೋಪ

ಭಾರತ ಸೇವಾದಳ ವತಿಯಿಂದ ಸೇವಾದಳ ಸಪ್ತಾಹದ ಸಮಾರೋಪ


ಪುತ್ತೂರು: ಜಿಲ್ಲಾ ಭಾರತ ಸೇವಾದಳ ವತಿಯಿಂದ ಪುತ್ತೂರು ತಾಲೂಕಿನ ಕೆಪಿಎಸ್ ಕೆಯ್ಯುರು ಕಾಲೇಜಿನಲ್ಲಿ ಜ.3 ರಂದು ಸೇವಾದಳ ಸಪ್ತಾಹದ ಸಮಾರೋಪ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಎಸ್.ಬಿ. ಜಯರಾಮ್ ರೈ ಅವರು, ಸೇವಾದಳ ಸಪ್ತಾಹ ಕಾರ್ಯಕ್ರಮ ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೇವಾದಳದ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಿರುವುದು ಮಾತ್ರವಲ್ಲದೆ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳಿಗೆ ಆಗುವ ದಷ್ಪರಿಣಾಮದ ಬಗ್ಗೆ ಮಾಹಿತಿಯನ್ನು ನೀಡುವ ಬಗ್ಗೆ ಕಾರ್ಯಕ್ರಮ ಮತ್ತು ಅರೋಗ್ಯ ಕಾಳಜಿ ಬಗ್ಗೆ ಕಾರ್ಯಕ್ರಮ ನೀಡುತ್ತಾ ಬಂದಿದೆ. ವಿದ್ಯಾರ್ಥಿಗಳು ಶಿಸ್ತು ಬದ್ಧವಾದ ಜೀವನಕ್ಕೆ ಒತ್ತು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಮಹಾಬಲ ರೈ, ಸೇವಾದಳದ ಕೋಶಾಧಿಕಾರಿ ಸದಾಶಿವ ಭಟ್, ಮುಖ್ಯ ಸಂಘಟಕ ಮಂಜೇಗೌಡ, ವಿಶ್ವೇಶ್ವರ ಭಟ್, ಮಮತ ಕುಮಾರಿ, ಉಪನ್ಯಾಸಕ ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article