ಕುಕ್ಕೆಯಲ್ಲಿ ಆಶ್ಲೇಷ ನಕ್ಷತ್ರದಂದು 1400 ಆಶ್ಲೇಷ ಬಲಿ ಸೇವೆ
Tuesday, January 6, 2026
ಸುಬ್ರಮಣ್ಯ: ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರವಾದ ಮಂಗಳವಾರ ದಾಖಲೆಯ 1400 ಆಶ್ಲೇಷ ಬಲಿ ಸೇವೆಗಳು ನಡೆಯುತ್ತಿದ್ದು, ಸುಬ್ರಹ್ಮಣ್ಯನಿಗೆ ಮಂಗಳವಾರ ವಿಶೇಷ ದಿನವೂ ಆಗಿದ್ದರಿಂದ ಆಶ್ಲೇಷ ನಕ್ಷತ್ರವು ಈ ದಿನವೇ ಬಂದಿದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಭಕ್ತರು ಸೇವೆಗಾಗಿ ಶ್ರೀ ಕ್ಷೇತ್ರಕ್ಕೆ ನಿನ್ನೆಯಿಂದಲೇ ಆಗಮಿಸಿದ್ದರು.
ಬೆಳಗ್ಗೆ 6.30 ಗಂಟೆಗೆ ಆರಂಭವಾದ ಆಶ್ಲೇಷ ಬಲಿ ಸೇವೆ ನಿರಂತರವಾಗಿ ನಾಲ್ಕು ಐದು ಬ್ಯಾಚುಗಳಲ್ಲಿ 11 ಗಂಟೆ ತನಕ ಆಶ್ಲೇಷ ಬಲಿ ಸೇವೆ ನಡೆಯಿತು. ಹಾಗೆ ಸಂಜೆ 5 ಗಂಟೆ ನಂತರ ಮತ್ತೊಂದು ಬ್ಯಾಚಿನಲ್ಲಿ ಕೂಡ ಆಶ್ಲೇಷ ಬಲಿ ಸೇವೆ ನಡೆದಿರುತ್ತದೆ. ಕುಕ್ಕೆ ಕ್ಷೇತ್ರದ ಒಳಾಂಗಣ, ಹೊರಾಂಗಣ,ರಥಬೀದಿ ಹಾಗೂ ಎಲ್ಲೆಡೆಗಳಲ್ಲಿ ಭಕ್ತರು ಜಮಯಿಸಿದ್ದರು. ವಾಹನ ಪಾರ್ಕಿಂಗ್ ಸ್ಥಳಗಳೆಲ್ಲವೂ ವಾಹನಗಳಿಂದ ಪೂರ್ತಿಯಾಗಿ ಇತ್ತು. ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಗಳು, ಹೋಂ ಗಾರ್ಡ್ಸ್ ಹಾಗೂ ಪೊಲೀಸರ ನೆರವಿನೊಂದಿಗೆ ಕ್ಷೇತ್ರಕ್ಕೆ ಬಂದಿರುವ ಭಕ್ತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಶ್ರಮಿಸುತ್ತಿದ್ದರು.

