ಅನಧಿಕೃತ ಅಂಗಡಿ ತೆರವುಗೊಳಿಸಲು ನೋಟಿಸ್
Saturday, January 17, 2026
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಮಣ್ಯ ಎಂಬಲ್ಲಿ ಸರ್ವೆ ನಂಬರ್ 82/5ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆಗೊಳ್ಳದೆ ಹಾಗೂ ಇ-ಖಾತೆ ಪಡೆಯದೆ, ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಗೆ ದೂರು ಬಂದಿರುತ್ತದೆ.
ಆ ನಿಟ್ಟಿನಲ್ಲಿ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿ ವಹಿವಾಟನ್ನು ನಡೆಸಿದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಜಾಗದ ಮಾಲಕರಾದ ಎಂವಿ ಮಂಜುನಾಥ ಹಾಗೂ ಎಂವಿ ಶ್ರೀವತ್ಸ ಬಳ್ಪ ಅವರಿಗೆ ನೋಟಿಸ್ ನೀಡಿರುತ್ತಾರೆ.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿ ಸದರಿ ಜಾಗವು ಈ ಹಿಂದೆ ನ್ಯಾಯಾಲಯದಲ್ಲಿ ಇದ್ದು ಪ್ರಸ್ತುತ ನ್ಯಾಯಾಲಯದ ಆದೇಶದ ಅನ್ವಯ ಸದರಿ ಜಾಗದ ಪರಿಪೂರ್ಣ ಮಾಲಕತ್ವ ಎಂವಿ ಮಂಜುನಾಥ ಹಾಗೂ ಎಂವಿ ಶ್ರೀವತ್ಸ ಬಳ್ಪ ಅವರಿಗೆ ಬಂದಿರುತ್ತದೆ. ಆದ್ದರಿಂದ ಆ ಜಾಗದಲ್ಲಿನ ನಿವೇಶನಗಳಿಗೆ ಭೂ ಪರಿವರ್ತನೆಗೊಳಿಸಿ ಹಾಗೂ ಇ-ಖಾತೆ ಪಡೆದುಕೊಂಡು ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯಿಂದ ನಿಯಮಾನಸಾರ ವ್ಯಾಪಾರ ಪರವಾನಿಗೆ ಪಡಕೊಳ್ಳುವಂತೆ ಹಾಗೂ ಅದುವರೆಗೆ ಇರುವಂತಹ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿವಾಟನ್ನು ನಡೆಸದಂತೆ ತಪ್ಪಿದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ತಿಳಿಸಿದೆ.