ಗಣೇಶ್ ಸುಬ್ರಹ್ಮಣ್ಯ ರಾಷ್ಟ್ರೀಯ ವೈಟ್ ಲಿಪ್ಟಿಂಗ್‌ಗೆ ಆಯ್ಕೆ

ಗಣೇಶ್ ಸುಬ್ರಹ್ಮಣ್ಯ ರಾಷ್ಟ್ರೀಯ ವೈಟ್ ಲಿಪ್ಟಿಂಗ್‌ಗೆ ಆಯ್ಕೆ


ಸುಬ್ರಹ್ಮಣ್ಯ: ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿನ ದ್ವೀತಿಯ ಪಿಯು ವಿದ್ಯಾರ್ಥಿ ಸುಬ್ರಹ್ಮಣ್ಯದ ಗಣೇಶ್ ಸುಬ್ರಹ್ಮಣ್ಯ ರಾಷ್ಟ್ರೀಯ ಮಟ್ಟದ  ವೈಟ್ ಲಿಪ್ಟಿಂಗ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ಕೋಲಾರದಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ೧೧೦ ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಜ.೯ ರಂದು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 

ಇವರು ಸುಬ್ರಹ್ಮಣ್ಯ ಉದ್ಯಮಿ ರವಿಕಕ್ಕೆಪದವು ಮತ್ತು ಗೀತಾ ರವಿ ದಂಪತಿಗಳ ಪುತ್ರ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಹಳೆ ವಿದ್ಯಾರ್ಥಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article