ಅಕ್ರಮ ಮರಳು ಸಾಗಾಟ ಪತ್ತೆ: ಪ್ರಕರಣ ದಾಖಲು
Saturday, January 24, 2026
ಸುಬ್ರಹ್ಮಣ್ಯ: ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿರುವ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು ಸಿಬ್ಬಂದಿಗಳೊಂದಿಗೆ ಜ.24ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ, ಕೇನ್ಯ ಗ್ರಾಮದ ಕಣ್ಕಲ್ ಎಂಬಲ್ಲಿ ಕುಮಾರಧಾರ ನದಿಯ ದಡದಿಂದ ಪರವಾನಿಗೆ ಇಲ್ಲದೇ ಪಿಕ್‌ಅಪ್ ವಾಹನದಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯಂತೆ ಘಟನಾ ಸ್ಥಳಕ್ಕೆ ತೆರಳಿ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದ್ದು, ಅದರಲ್ಲಿ ಮರಳು ಇರುವುದು ಕಂಡುಬಂದಿದೆ.
ವಾಹನದ ಚಾಲಕನ ಯಾವುದೇ ಪರವಾನಿಗೆ ಇಲ್ಲದೇ ಕೇನ್ಯ ಗ್ರಾಮದ ಕಣ್ಕಲ್‌ನಿಂದ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿರುತ್ತಾನೆ. 4 ಸಾವಿರದ ಅಂದಾಜು 1 ಟನ್ ಮರಳು ಹಾಗೂ ಮರಳು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.