ಪಂಜ ಶಾಲೆಯಲ್ಲಿ ಮಕ್ಕಳೊಂದಿಗೆ ಎಸ್.ಐ. ಸಂವಾದ ಕಾರ್ಯಕ್ರಮ
Tuesday, January 27, 2026
ಸುಬ್ರಮಣ್ಯ: ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಂಗಳವಾರ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಮಧ್ಯಾಹ್ನ ಶಾಲೆಗೆ ಭೇಟಿ ನೀಡಿದ ಪೊಲೀಸ್ ಉಪನಿರೀಕ್ಷಕರನ್ನು ಶಾಲೆಯ ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕ ವೃಂದದವರು ಬರಮಾಡಿಕೊಂಡರು. ನಂತರ ಕ್ಲಾಸ್ ರೂಮಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಮಕ್ಕಳ ಸುರಕ್ಷತೆ ಬಗ್ಗೆ, ಶಿಸ್ತು ಬಗ್ಗೆ, ಹಾಗೂ ಜನರಲ್ ನಾಲೆಜ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದವರ ಬಗ್ಗೆ ಎಸ್‌ಐ ಅವರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಹಾಗೂ ಶಾಲೆಯ ಮೂಲಭೂತ ಸೌಕರ್ಯಗಳು,ಇನ್ನಿತರ ಸೌಲಭ್ಯ, ಪಾಠ ಪ್ರವಚನಗಳ ಬಗ್ಗೆ ಕೇಳಿ ತಿಳಿದುಕೊಂಡರು.
ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ಟಿ. ಹಾಗೂ ಸಹ ಶಿಕ್ಷಕರಾದ ಗುಲಾಬಿ ಎ., ನೇತ್ರಾವತಿ ಎ.ಆರ್., ಮಂಜುಳಾ ಎ.ಎಸ್., ಚೇತನ ಕುಮಾರಿ ಎಚ್.ಸಿ., ಶಿವಾನಂದ, ವಿನುತಾ ರೈ ಉಪಸ್ಥಿತರಿದ್ದರು.