ಕುಕ್ಕೆ ದೇವಳಕ್ಕೆ ಸಂಸದ ಮೈಸೂರಿನ ಯದುವೀರ ಒಡೆಯರ್ ಭೇಟಿ
Tuesday, January 27, 2026
ಸುಬ್ರಮಣ್ಯ: ಮೈಸೂರಿನ ಲೋಕಸಭಾ ಸದಸ್ಯ ಯದುವೀರ ದತ್ತ ಒಡೆಯರ್ ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಸುಬ್ರಹ್ಮಣ್ಯ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿದ್ವತ್ ಸಮ್ಮೇಳನ ವಿಶ್ವ ಸಂಭ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಈ ಸಂದರ್ಭದಲ್ಲಿ ಈ ದೇವಳಕ್ಕೆ ಭೇಟಿ ನೀಡಿದ್ದರು.
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಳದ ಪರವಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಯೇಸುರಾಜ್ ಸಂಸದರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ತದನಂತರ ಒಡೆಯರ್ ಅವರು ಶ್ರೀ ದೇವಳದಲ್ಲಿ ಫಲಹಾರ ಸ್ವೀಕರಿಸಿದರು.
ಶಿಷ್ಟಾಚಾರ ವಿಭಾಗದ ಜಯರಾಮರಾವ್, ಪ್ರಮೋದ್, ಗೋಪಿನಾಥ್ ಇದ್ದರು.