ತೃಪ್ತಿ ಜಿ.ಎನ್. ಅವರಿಗೆ ಡಾಕ್ಟರೇಟ್ ಪದವಿ
Wednesday, January 21, 2026
ಸುಬ್ರಹ್ಮಣ್ಯ: ಎನೆಕಲ್ಲು ಗ್ರಾಮದ ಪದೇಲ ಸುಜನ್ ಅವರ ಪತ್ನಿ ತೃಪ್ತಿ ಜಿಎನ್ ಅವರಿಗೆ ‘ಏಕಲೊಜಿಕಲ್ ಸಿಲೆಕ್ಟೆಡ್ ಲೇಕ್ ಅಂಡ್ ದೇರ್ ಬಯೋ ಡೈವರ್ಸಿಟಿ ಇನ್ ಸೋಮವಾರಪೇಟೆ’ ಎಂಬ ಪ್ರಬಂಧವನ್ನು ಮೈಸೂರು ಯುನಿವರ್ಸಿಟಿಯ ಸಸ್ಯಶಾಸ್ತ್ರ ವಿಭಾಗದಲ್ಲಿ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಜನವರಿ ೫ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಜರಗಿದ ಪದ ಪ್ರಧಾನ ಸಮಾರಂಭದಲ್ಲಿ ಅವರು ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
ತೃಪ್ತಿ ಜಿ.ಎನ್. ಅವರು ಬೆಂಗಳೂರಿನ ಪ್ರೇಮ್ ಯೂನಿವರ್ಸಿಟಿಯಲ್ಲಿ ಕೋ ಆರ್ಡಿನೇಟರ್ ಆಗಿ ಹಾಗೂ ಅವರ ಪತಿ ಸುಜನ್ ಅವರು ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಇವರು ಏನೆಕಲ್ ಗ್ರಾಮದ ಪದೇಲ ನೇಮಿರಾಜ್ ಹಾಗೂ ಜಯಶೀಲ ದಂಪತಿ ಅವರ ಸೊಸೆ ಆಗಿರುತ್ತಾರೆ.