ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ
Friday, January 16, 2026
ಉಜಿರೆ: ವೇಣೂರು ಬಳಿ ಇರುವ ಬಜಿರೆ ಗ್ರಾಮದಲ್ಲಿರುವ ಹಲ್ಲಂದೋಡಿ ಬಸದಿ ಭಗವಾನ್ ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ಜ.29 ರಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ್ ಇಂದ್ರ ತಿಳಿಸಿದ್ದಾರೆ.
ಜ.29 ರಂದು ಬೆಳಗ್ಗೆ 7 ಗಂಟೆಯಿಂದ ವಿಮಾನಶುದ್ಧಿ, ಶಾಂತಿಹೋಮ ನಡೆಯಲಿದೆ.
ಅಪರಾಹ್ನ ಎರಡು ಗಂಟೆಯಿಂದ ಪದ್ಮಾವತಿ ದೇವಿ ಅಷ್ಟೋತ್ತರ ಸಹಸ್ರ ನಾಮಾರ್ಚನೆ, ಸಂಜೆ ಗಂಟೆ 5.30 ರಿಂದ ಲಕ್ಷ ಹೂವಿನ ಪೂಜೆ ನಡೆಯಲಿದೆ.
ರಾತ್ರಿ 7 ಗಂಟೆಯಿಂದ ವಸಂತಕಟ್ಟೆಯಲ್ಲಿ ಅಷ್ಟಾವಧಾನ ಪೂಜೆ, ರಾತ್ರಿ 8 ಗಂಟೆಯಿಂದ ಪೂಜ್ಯ ಚಾರುಕೀರ್ತಿ ಭಟ್ಟಾರಕರಿಂದ ಮಂಗಲಪ್ರವಚನ, ಬಳಿಕ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಹೆಚ್ಚಿನ ಮಾಹಿತಿಗೆ: ಬಿ. ಶಶಿಕುಮಾರ್ ಇಂದ್ರ, ಮೊಬೈಲ್: 9449104899. ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.