ಶೀರೂರು ಮಠದ ವೇದವರ್ಧನತೀರ್ಥ ಶ್ರೀಪಾದರು ಧರ್ಮಸ್ಥಳ ಭೇಟಿ
Friday, January 2, 2026
ಉಜಿರೆ: ಉಡುಪಿಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಮೂಲತಃ ಪೂರ್ವಾಶ್ರಮದಲ್ಲಿ ನಿಡ್ಲೆ ನಿವಾಸಿಯಾದ ಶೀರೂರು ಮಠದ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಲಾಯಿತು.
ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು. ಸ್ವಾಮೀಜಿಯವರು ದೇವರದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬಳಿಕ ಉಜಿರೆಗೆ ಪ್ರಯಾಣ ಮುಂದುವರಿಸಿದರು.


