ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ

ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆ


ಉಳ್ಳಾಲ: ಗಣರಾಜ್ಯೋತ್ಸವದ ಮಹತ್ವ, ತತ್ವ, ಆದರ್ಶಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಅವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದ ಉಳ್ಳಾಲ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಬಿಸಿಲಲ್ಲಿ ನಿಂತು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಿಸುತ್ತಾರೆ. ಇದು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಾಯ ಆಗುತ್ತದೆ. 35 ವರ್ಷಗಳ ಹಿಂದೆ ನಾನು ನೆಹರು ಮೈದಾನದಲ್ಲಿ ಫೇರೇಡ್‌ನಲ್ಲಿ ಭಾಗವಹಿಸುತ್ತಿದ್ದೆ. ಈಗ ನೀವೆಲ್ಲ ನನಗೆ ಗೌರವ ನೀಡುತ್ತೀರಿ. ಇದೇ ರೀತಿಯಲ್ಲಿ ಈಗಿನ ವಿದ್ಯಾರ್ಥಿಗಳು ಅಭಿವೃದ್ಧಿ ಆಗಬೇಕು ಎಂದರು.

ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಒಬ್ಬಂಟಿ ಆಗಿ ಮಹಿಳೆ ಹೋಗಲು ಧೈರ್ಯ ನೀಡಿರುವುದು ಅಂಬೇಡ್ಕರ್ ಅವರ ಸಂವಿಧಾನ ಆಗಿದೆ. ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಗೆ ೧೮೬ ಕೋಟಿ ಕುಡಿಯುವ ನೀರಿಗೆ ೨೫೬ ಕೋಟಿ ಮೀಸಲಿಡಲಾಗಿದೆ. ಅಭಿವೃದ್ಧಿ ನಮ್ಮ ಗುರಿ ಆಗಬೇಕು ಎಂದರು.

ಇದೇ ಸಂದರ್ಭದಲ್ಲಿ ಅವರು ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಅವರ ಪ್ರತಿಮೆಗೆ ಹಾಗೂ ಅಬ್ಬಕ್ಕ ಸರ್ಕಲ್ ಬಳಿ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಹಳೆಕೋಟೆ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಕಂದಾಯ ನಿರೀಕ್ಷಕ ಪ್ರಮೋದ್, ಉಪ ತಹಶೀಲ್ದಾರ್ ವಿಜಯ ವಿಕ್ರಮ್, ಪೌರಾಯುಕ್ತ ಸಂತೋಷ್, ಗ್ರಾಮಕರಣಿಕ ಸಂತೊಷ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಮುಸ್ತಫಾ ಅಬ್ದುಲ್ಲಾ, ಗ್ರಾಮಕರಣಿಕ ಲಿಂಗಪ್ಪ, ನಗರ ಸಭೆ ಕಂದಾಯ ಅಧಿಕಾರಿ ನವೀನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ, ಮನ್ಸೂರ್ ಮಂಚಿಲ, ಮುಸ್ತಫಾ ಮಲಾರ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ವಕ್ಫ್ ಸದಸ್ಯ ರಝಿಯಾ ಇಬ್ರಾಹೀಮ್, ಕೋಟೆಕಾರ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ಉಳ್ಳಾಲ ತಾ.ಪಂ. ಇ.ಒ. ಗುರುದತ್, ಸೋಮೇಶ್ವರ ಪುರಸಭೆ ಸದಸ್ಯ ಪುರುಷೋತ್ತಮ ಶೆಟ್ಟಿ, ಸಲಾಮ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.

ತ್ಯಾಗಂ ಹರೇಕಳ ಸ್ವಾಗತಿಸಿ, ಮೋಹನ್ ಶಿರ್ಲಾಲ್, ಕೆಎಮ್‌ಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article