ನರಿಂಗಾನ ಲವ-ಕುಶ ಕಂಬಳಕ್ಕೆ ಚಾಲನೆ
ಅವರು ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಬೋಳದಲ್ಲಿ ಶನಿವಾರದಂದು ನಡೆದ ನಾಲ್ಕನೇ ವರ್ಷದ ‘ಲವ-ಕುಶ ನರಿಂಗಾನ ಕಂಬಳ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಕರಾವಳಿ ಕರ್ನಾಟಕವು ರಾಜ್ಯ, ದೇಶ ಮಾತ್ರವಲ್ಲದೆ ಪ್ರಪಂಚದಲ್ಲೇ ವಿಶೇಷ ಸ್ಥಾನ, ಮಾನವನ್ನು ಪಡೆದಿದೆ. ಜಿಲ್ಲೆಯ ಇಪ್ಪತ್ತಮೂರು ಕಂಬಳ ಉತ್ಸವಗಳಲ್ಲಿ ನರಿಂಗಾನ ಕಂಬಳವೂ ಸ್ಪೀಕರ್ ಖಾದರ್ ಅವರ ಉಸ್ತುವಾರಿಯಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ನಡೆಯುತ್ತಾ ಬಂದಿರುವುದು ಶ್ಲಾಘನೀಯವೆಂದರು.
ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಈ ಜಾಗ ಉಳಿಸುವ ಮೂಲಕ ಕಂಬಳವನ್ನು ಶಾಶ್ವತವಾಗಿ ಉಳಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ, ಕಂಬಳದ ಹಿರಿಯ ವಿಶ್ಲೇಷಕ ಗುಣಪಾಲ ಕಡಂಬ,ಬೋಳ ಚರ್ಚ್‌ನ ಧರ್ಮಗುರು ಪೀಟರ್ ಸಲ್ದಾನ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಶಾಂತ್ ಕಾಜವ, ಮಮತಾ ಗಟ್ಟಿ, ಮೋಹನ್ ಆಳ್ವ, ಪ್ರಮೋದ್ ಕುಮಾರ್ ರೈ, ದಿನಕರ್ ಆಳ್ವ ಯಾನೆ ರಾಮಣ್ಣ ರೈ, ಎ.ಸಿ. ಭಂಡಾರಿ, ಸುರೇಶ್ ಶೆಟ್ಟಿ, ಚಂದ್ರ ಹಾಸ್ ಮುಡಿಮಾರ್,ಅರಸು ಪೂಜಾರಿ, ಸಚ್ಚಿದಾನಂದ ಶೆಟ್ಟಿ, ಮುಳಿಯ ವೆಂಕಟೇಶ್, ಸುರೇಶ್ ಭಟ್ನಗರ ಮತ್ತಿತರರು ಉಪಸ್ಥಿತರಿದ್ದರು.
ನರಿಂಗಾನ ಲವ-ಕುಶ ಕಂಬಳ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.