ಗ್ರೌಂಡ್ ಸ್ವಚ್ಛತಾ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಿತ್ತಿ ಪತ್ರಗಳ ಪ್ರದರ್ಶನ ಹಾಗೂ ಘೋಷಣೆಗಳ ಮೂಲಕ ಪರಿಸರ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಸಂಘಟನೆಯ ಸದಸ್ಯರು ಅಧಿಕಾರಿಗಳ ಗಮನ ಸೆಳೆದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಗಳೂರು ರಿಯಾಝ್ ಮಾತನಾಡಿ, ಸೀ ಗ್ರೌಂಡ್ ಕಡಲತೀರದಲ್ಲಿ ತ್ಯಾಜ್ಯ ರಾಶಿ ಸಾರ್ವಜನಿಕ ಆರೋಗ್ಯಕ್ಕೆ ಭಾರೀ ಅಪಾಯವಾಗಿದ್ದು, ಇದಕ್ಕೆ ತಕ್ಷಣದ ಕ್ರಮ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ರಹ್ಮಾನ್ ಸಾಗರ್ ಅವರು ಸೀ ಗ್ರೌಂಡ್‌ನ ಐತಿಹಾಸಿಕ ಮಹತ್ವವನ್ನು ಸ್ಮರಿಸಿ, ಇಂದಿನ ದುಸ್ಥಿತಿಗೆ ಕಳವಳ ವ್ಯಕ್ತಪಡಿಸಿದರು. ಶಾಶ್ವತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಭಾಷಣ ಮಾಡಿದ ಡಿ.ವೈ.ಎಫ್.ಐ ಉಳ್ಳಾಲ ಘಟಕದ ಜಿಲ್ಲಾಧ್ಯಕ್ಷ ಇಮ್ತಿಯಾಝ್ ಬಿ.ಕೆ. ಅವರು, ಪರಿಸರ ಸಂರಕ್ಷಣೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದೆಂದು ತಿಳಿಸಿ, ಸ್ವಚ್ಛ ಪರಿಸರಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ಸೀ ಗ್ರೌಂಡ್ ಕಡಲತೀರದಿಂದ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸುವುದು, ಶಾಶ್ವತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಬೇಕು, ಮಾಲಿನ್ಯಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕ ಸ್ಥಳಗಳ ಸಂರಕ್ಷಣೆಗೆ ಸ್ಥಳೀಯ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಅಗತ್ಯವೆಂದು ಒತ್ತಾಯಿಸಲಾಯಿತು.
ಸ್ಥಳೀಯ ಮಾಜಿ ಕೌನ್ಸಿಲರ್ ಇಬ್ರಾಹೀಂ ಖಲೀಲ್, ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ಅಧ್ಯಕ್ಷ ಫೈರೋಝ್ ಕೋಟೆಪುರ, ರಾಜ್ಯ ಸದಸ್ಯರಾದ ಅಶ್ರಫ್ ಖಾನ್, ಇಕ್ಬಾಲ್, ನಝೀರ್ ಆಲ್ಫಾ, ಇಮ್ತಿಯಾಝ್ ಅಳೇಕಲ, ಶಾಫಿ ಹಳೆಕೋಟೆ, ರಿಯಾಜ್ ಹಳೆಕೋಟೆ, ವಲಯ ಸದಸ್ಯರಾದ ಸಿದ್ದೀಕ್ ಸ್ಪೋರ್ಟಿಂಗ್, ಖಾದರ್ ಮಂಚಿಲ, ರಾಯಲ್ ಫೌಂಡೇಶನ್ ಕಾರ್ಯದರ್ಶಿ ಮುಸ್ತಫಾ ಮುಕ್ಕಚ್ಚೇರಿ, ನವಾಝ್ ಸಹಿತ ಅನೇಕ ಕ್ರೀಡಾಪಟುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.