ಕುಂದಾಪುರ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪದ ಪ್ರದಾನ ಸಮಾರಂಭ
Thursday, January 22, 2026
ಕುಂದಾಪುರ: ಜ್ಯುವೆಲ್ಲರ್ಸ್ ಅಸೋಸಿಯೇಷನ್ ಕುಂದಾಪುರ ಇವರ 2026ನೇ ಸಾಲಿನ ಪದ ಪ್ರದಾನ ಸಮಾರಂಭವು ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜು ಕ್ಯಾಂಪಸ್ ನಲ್ಲಿರುವ ಕೊಯಾಕುಟ್ಟಿ ಹಾಲ್ ನಲ್ಲಿ ಇತ್ತೀಚೆಗೆ ನೆರವೇರಿತು.
ನೂತನ ಅಧ್ಯಕ್ಷ ವೆಂಕಟೇಶ್ ಶೇಟ್ (ಶ್ರೀ ರಾಘವೇಂದ್ರ ಜ್ಯುವೆಲ್ಲರ್ಸ್ ಮಾಲೀಕರು) ಅವರಗೆ ನಿರ್ಗಮನ ಅಧ್ಯಕ್ಷ ಹೆಚ್. ಗಣೇಶ್ ಶೇಟ್ ಅವರು ಅಧಿಕಾರ ಹಸ್ತಾಂತರ ಮಾಡಿದರು.
M.I.T ಮಣಿಪಾಲ ಅಕಾಡೆಮಿಯ ಸೀನಿಯರ್ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಹರ್ಷೇಂದ್ರ ಎನ್. ಶೇಟ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಇದರ ಹಿರಿಯ ಸದಸ್ಯರಾದ ಉದಯ ಜ್ಯುವೆಲ್ಲರ್ಸ್ ಮಾಲಿಕರಾದ ಉದಯ ಕುಮಾರ್ ಶೇಟ್ ಮತ್ತು ಅಂಪಾರು ಸುರೇಶ್ ಶೇಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಸೋಸಿಯೇಷನ್ ನ ಸದಸ್ಯರ ಮೊಮ್ಮಕಳು ಗಳಾದ ಮಾಸ್ಟರ್ ಶ್ರೀನೀತ್ ಶೇಟ್ (ರಾಷ್ಟ್ರ ಮಟ್ಟದ ಚೆಸ್ ಆಟಗಾರ- ಕಿರಿಯ ವಿಭಾಗ ಮತ್ತು ಹನುಮಾನ್ ಚಾಲೀಸ್ ಪಠಣ ದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ ಮಾಸ್ಟರ್ ಅಮೋಘ ಶರತ್ ಶೇಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ S.S.L.C ಮತ್ತು P.U.C ನಲ್ಲಿ 2024 - 2025 ನೇ ಸಾಲಿನಲ್ಲಿ ಶೇಕಡಾ 85 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ನೂತನ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಶೇಟ್, ಸಲಹಾ ಸಮಿತಿ ಮುಖ್ಯಸ್ಥರಾದ ಗಣೇಶ್ ಆಚಾರ್ಯ ಮತ್ತು ಕೋಶಾಧಿಕಾರಿ ಪ್ರಕಾಶ್ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ ಶೇಟ್ ನಾಡ-ಗುಡ್ಡೆ ಅಂಗಡಿ ಮತ್ತು ಸದಾನಂದ ಶೇಟ್ ತ್ರಾಸಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಶೇಟ್ ವಂದಿಸಿದರು.


