ಆಧುನಿಕ ಕಿಂಡಿ ಅಣೆಕಟ್ಟಿನ ನಿರೀಕ್ಷೆಯಲ್ಲಿ ಕೇಮಾರಿನ ಕೃಷಿಕರು

ಆಧುನಿಕ ಕಿಂಡಿ ಅಣೆಕಟ್ಟಿನ ನಿರೀಕ್ಷೆಯಲ್ಲಿ ಕೇಮಾರಿನ ಕೃಷಿಕರು


ಮೂಡುಬಿದಿರೆ: ಸುಮಾರು ಹತ್ತಿಪ್ಪತ್ತು ಎಕ್ರೆ ಪ್ರದೇಶದ ಕೃಷಿಗೆ ನೀರಿನ ಅವಶ್ಯಕತೆಯಿರುವ ಕೇಮಾರು ಪ್ರದೇಶಕ್ಕೆ  ಆಧುನಿಕ ಕಿಂಡಿ ಅಣೆಕಟ್ಟಿನ ಅವಶ್ಯಕತೆಯಿದ್ದು ಕೃಷಿಕರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. 


ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಪರಿಸರದ ಕೆಲ್ಲಬೆಟ್ಟು ಮನೆ ಬಳಿ ಕಳೆದ ಮೂವತ್ತೈದು ವಷ೯ಗಳ ಹಿಂದೆ ಶಾಸಕರಾಗಿದ್ದ ಕೆ. ಅಮರನಾಥ ಶೆಟ್ಟಿ ಅವರ ಮುತುವಜಿ೯ಯಲ್ಲಿ  ನಿಮಾ೯ಣಗೊಂಡಿರುವ ಕಿಂಡಿ ಅಣೆಕಟ್ಟಿನ ಹಲಗೆಗಳು ಇದೀಗ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಕೃಷಿಗೆ ನೀರು ನಿಲ್ಲಿಸಲು ಕೃಷಿಕರು ಹರಸಾಹಸ ಪಡುತ್ತಿದ್ದಾರೆ. 


ಕೇಮಾರು ಪ್ರದೇಶದ ಎಷ್ಟೋ ಕೃಷಿ ಕುಟುಂಬಗಳು ಈ ಅಣೆಕಟ್ಟಿನ ನೀರಿನ ಆಶ್ರಯದಿಂದಲೇ ಕೃಷಿಯನ್ನು ಮಾಡಿಕೊಂಡು ಬಂದಿದ್ದರು. ಆದರೆ ಇದೀಗ ಅಣೆಕಟ್ಟುವಿನ ಎರಡೂ ಬದಿಗಳು ಮತ್ತು ಹಲಗೆಗಳು ಶಿಥಿಲಗೊಂಡಿವೆ.  

ಕೆ.ಪಿ. ಸುಚರಿತ ಶೆಟ್ಟಿ ಅವರು ಜಿ.ಪಂ. ಅಧ್ಯಕ್ಷರಾಗಿದ್ದ ಸಂದಭ೯ದಲ್ಲಿ ಅವರ ಅನುದಾನದಿಂದ ಹಲಗೆಗಳನ್ನು ಹಾಕಿಸಿಕೊಟ್ಟು ಕೃಷಿಗೆ, ಕೃಷಿಕರಿಗೆ ಅನುಕೂಲವಾಗುವಂತೆ ಮಾಡಿದ್ದರು ಆದರೆ 10 ವಷ೯ಗಳ ಬಾಳಿಕೆಯ ನಂತರ ಅದೂ ಶಿಥಿಲಗೊಂಡು ಕೃಷಿಕರು ತೊಂದರೆಯನ್ನು ಅನುಭವಿಸುವಂತ್ತಾಗಿತ್ತು. 

ಪಾಲಡ್ಕ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೇಮಾರು ಸುಕೇಶ್ ಶೆಟ್ಟಿ, ಕೃಷಿಕರಾದ ಶ್ರೀಕಾಂತ್ ಹೆಗ್ಡೆ, ಸಚ್ಚೀಂದ್ರ ಶೆಟ್ಟಿ, ರೇವಂತ್ ಪೂಜಾರಿ, ಜಾನ್ ಪಿರೇರಾ, ಶ್ರೀವತ್ಸ ಭಟ್ ಹಾಗೂ ನೀರಜಾಕ್ಷಿ ಶೆಟ್ಟಿ  ಸೇರಿಕೊಂಡು ಸುಮಾರು 30 ಸಾವಿರದಷ್ಟು ಹಣವನ್ನು ಖಚು೯ ಮಾಡಿ ಅಡಿಕೆ ಮರವನ್ನು ಬಳಸಿ ಇದೀಗ ಕಳೆದ ಏಳು ವಷ೯ಗಳಿಂದ ಅಡಿಕೆ ಮರಗಳನ್ನು ತುಂಡರಿಸಿ  ಹಲಗೆಯ ತರಹ ಭಾಗ ಮಾಡಿ ಮಧ್ಯಕ್ಕೆ  ಮಣ್ಣು ತುಂಬಿಸಿ ಕಟ್ಟಗಳಲ್ಲಿ ನೀರು ನಿಲ್ಲಿಸುವಂತೆ ಮಾಡಿ ಕೃಷಿಗೆ ನೀರು ಹಾಯಿಸುತ್ತಿದ್ದಾರೆ ಆದರೆ ಇದು ತಾತ್ಕಾಲಿಕವಷ್ಟೇ. 

ಇದೀಗ ಶಾಸಕರಾಗಿರುವ ಉಮಾನಾಥ ಕೋಟ್ಯಾನ್ ಅವರು ಅವರ ಅನುದಾನದಿದ ಕಳೆದ ಮೂರು ವರುಷಗಳ ಹಿಂದೆ ಅಣೆಕಟ್ಟಿನ ಒಂದು ಬದಿಯಲ್ಲಿ ಜನರು ನಡೆದುಕೊಂಡು ಹೋಗಲು ಸಹಕಾರಿಯಾಗುವಂತೆ ಕಾಮಗಾರಿಯನ್ನು ಮಾಡಿಸಿದ್ದಾರೆ. ಆದರೆ ಇನ್ನೊಂದು ಬದಿ ಶಿಥಿಲಗೊಂಡ ಸ್ಥಿತಿಯಲ್ಲಿಯೇ ಇದೆ. 

ಇದೀಗ ಇಲ್ಲಿ ಆಧುನಿಕ ಮಾದರಿಯ ಕಿಂಡಿ ಅಣೆಕಟ್ಟು ನಿಮಾ೯ಣವಾದರೆ ಬೇಸಿಗೆ ಕಾಲದಲ್ಲಿಯೂ ಕೃಷಿಗೆ ನೀರಿನ ತೊಂದರೆ ಬಾರದು. ಅಂತರ್ಜಲವೂ ವೃದ್ಧಿಯಾಗುತ್ತದೆ ಮತ್ತು ಕೃಷಿಯೂ ಹಸನಾಗಿ ಬೆಳೆಯಲು ಸಹಕಾರಿಯಾಗುತ್ತದೆ.


ತಮ್ಮ ಊರಿನ ಕೃಷಿಕರು ಮತ್ತು ಜನರಿಗೆ ನೀರಿನ ಸಮಸ್ಯೆ ಅಥವಾ ಯಾವುದೇ ಸಮಸ್ಯೆಗಳು ಕಾಡಿದಾಗ ಅದಕ್ಕೆ ತಕ್ಷಣಕ್ಕೆ ಸ್ಪಂದಿಸಿ ಆಪತ್ಭಾಂದವನಾಗುವವರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಅವರು ಇದೀಗ ಶಿಥಿಲಗೊಂಡಿರುವ ಕಿಂಡಿ ಅಣೆಕಟ್ಟಿನ ಬಗ್ಗೆ ಈಗಾಗಲೇ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಆದರೆ ಈ ಅಣೆಕಟ್ಟಿಗೆ ಯಾವಾಗ ಕಾಯ೯ಕಲ್ಪ ಸಿಗಬಹುದು ಎಂದು ಕಾಯಬೇಕಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article