ಕಾರ್ಕಳದ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ‘ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ’

ಕಾರ್ಕಳದ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ‘ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಪ್ರಶಸ್ತಿ’


ಕಾರ್ಕಳ: ಇಲ್ಲಿನ ಸಾಲ್ಮರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಶಾಂತ್ ಹೆಗ್ಡೆ ಅವರ ಸಹೋದರ ಶಾರ್ಜಾದಲ್ಲಿ ವಾಸಿಸುತ್ತಿರುವ ವೆಂಕಟೇಶ್ ಹೆಗ್ಡೆ ಬೋಳ ಮತ್ತು ಅಶ್ವಿನಿ ಭಟ್ ದಂಪತಿಯ ಪುತ್ರಿ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ‘ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್ ಗೌರವ ಪ್ರಶಸ್ತಿ’ ಲಭಿಸಿದೆ.

ಫೆ.14 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಆಡಳಿತಗಾರ ಡಾ. ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಅವರಿಂದ ಈ ವಿಶಿಷ್ಟ ಮನ್ನಣೆಯನ್ನು ಭಕ್ತಿ ಅವರು ಸ್ವೀಕರಿಸಿದರು.

ಭಕ್ತಿ ಅವರು ಪ್ರಸ್ತುತ ಶಾರ್ಜಾದ ದೆಹಲಿ ಪ್ರೈವೇಟ್ ಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಈ ಪ್ರಶಸ್ತಿಯು ಅತ್ಯುತ್ತಮ ಶೈಕ್ಷಣಿಕ ಸಾಧನೆ, ಅನುಕರಣೀಯ ವ್ಯಕ್ತಿತ್ವ, ನಾಯಕತ್ವದ ಗುಣಗಳು ಮತ್ತು ಕಲಿಕೆಯ ಕಡೆಗಿನ ಸಮರ್ಪಣೆಯನ್ನು ಗುರುತಿಸಿ ನೀಡಲಾಗುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article