ಇನ್ನೋವೇಶನ್ ಹಬ್‌ನಲ್ಲಿ ‘ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಮತ್ತು 3ಡಿ ಪ್ರಿಂಟಿಂಗ್’: ಕಾರ್ಯಾಗಾರ

ಇನ್ನೋವೇಶನ್ ಹಬ್‌ನಲ್ಲಿ ‘ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಮತ್ತು 3ಡಿ ಪ್ರಿಂಟಿಂಗ್’: ಕಾರ್ಯಾಗಾರ


ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ನಳಂದಾ ಆಂಗ್ಲಮಾಧ್ಯಮ ಶಾಲೆ ಮಂಗಳೂರು ಇವರ ಸಹಯೋಗದಲ್ಲಿ ನಳಂದಾ ಶಾಲೆಯ ವಿದ್ಯಾರ್ಥಿಗಳಿಗೆ ಫೆ.17 ರಂದು ರೊಬೊಟಿಕ್ಸ್, 3ಡಿ ಪ್ರಿಂಟಿಂಗ್ ಮತ್ತು ಇಂಟರ್ ನೆಟ್ ಆಫ್ ಥಿಂಗ್ಸ್ ಕುರಿತ ಕಾರ್ಯಾಗಾರ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಇನ್ನೋವೇಶನ್ ಹಬ್‌ನಲ್ಲಿ ನಡೆಯಿತು.


ಮಕ್ಕಳಲ್ಲಿ ವಿಜ್ಞಾನ ಮನೋಭಾವವನ್ನು ಬೆಳೆಸಿ, ಸೃಜನಶೀಲತೆ ಹಾಗೂ ಸಂಶೋಧನಾ ಆಸಕ್ತಿಯನ್ನು ಉತ್ತೇಜಿಸುವ ಸಲುವಾಗಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿದ್ದು, ರೋಬೋಟಿಕ್ಸ್‌ನ ಮೂಲಭೂತ ತತ್ವಗಳು, ಆರ್ಡಿನೊಬೋರ್ಡ್‌ಗಳ ಪರಿಚಯ, 3ಡಿ ಪ್ರಿಂಟಿಂಗ್, ಸೆನ್ಸರ್‌ಗಳು ಮತ್ತು ಮೋಟಾರ್‌ಗಳ ಬಳಕೆ, ಸರಳ ರೋಬೋ ನಿರ್ಮಾಣ ಮತ್ತು ಪ್ರೋಗ್ರಾಮಿಂಗ್ ಇತ್ಯಾದಿ ವಿಷಯಗಳ ಬಗ್ಗೆ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ಮೆಂಟರ್‌ಗಳಾದ ಹೃತಿಕ್ ಮತ್ತು ಆದರ್ಶ ನಡೆಸಿಕೊಟ್ಟರು.


ಶ್ರೀಶಾಂತ್ ಶೆಟ್ಟಿ ಸಹಕರಿಸಿದರು.

ಮಧ್ಯಾಹ್ನ ನಂತರದ ಅವಧಿಯಲ್ಲಿ ಮನರಂಜನಾತ್ಮಕ ಪ್ರಯೋಗಗಳ ಮೂಲಕ ಭೌತಶಾಸ್ತ್ರದ ಮೂಲಭೂತ ಅಂಶಗಳು, ದೈನಂದಿನ ಜೀವನದಲ್ಲಿ ಭೌತಶಾಸ್ತ್ರದ ಬಳಕೆ, ವಿದ್ಯುತ್ ಹಾಗೂ ಬೆಳಕು ಸಂಬಂಧಿತ ಸರಳ ಪ್ರಯೋಗಗಳು ಮತ್ತು ಜೀವರಸಾಯನಶಾಸ್ತ್ರದ ಬಹು ಕೋಶಗಳ ಅವಲೋಕನ, ಕೋಶಗಳ ರಚನೆ ಮತ್ತು ಕಾರ್ಯವಿಧಾನಗಳನ್ನು ಸೂಕ್ಷ್ಮದರ್ಶಕ ಬಳಕೆಯ ಮುಖಾಂತರ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆಗಳನ್ನು ರಶ್ಮಿ ಮತ್ತು ಸಹನಾ ಇವರು ವಿದ್ಯಾರ್ಥಿಗಳಿಗೆ ಮಾಡಿ ತೋರಿಸಿದರು.

ನಳಂದಾ ಆಂಗ್ಲಮಾಧ್ಯಮ ಶಾಲೆಯ ಸುಮಾರು 38 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಭೌತಶಾಸ್ತ್ರ ಅಧ್ಯಾಪಕಿ ವೀಣಾ, ರಸಾಯನ ಶಾಸ್ತ್ರದ ಶಿಕ್ಷಕಿ  ಇಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article