ಅಕ್ರಮ ಗೋ ಸಾಗಾಟ ಪತ್ತೆ: 35 ಜಾನುವಾರುಗಳ ರಕ್ಷಣೆ
Sunday, February 22, 2026
ಮಂಗಳೂರು: ಪೊಲೀಸರು ಕೈಗೊಂಡ ಮಿಂಚಿನ ಮತ್ತು ಸಕಾಲಿಕ ಕಾರ್ಯಾಚರಣೆಯಲ್ಲಿ ಅಕ್ರಮ ಗೋ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ.
ಮಂಗಳೂರು ಪದವು ಹೈ ವೇ ಬಳಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಗೋಸಾಗಾಟ ಮಾಡಲಾಗುತ್ತಿತ್ತು. ಭಜರಂಗದಳ ಕಾರ್ಯಕರ್ತರ ಮಾಹಿತಿಯ ಹಿನ್ನೆಲೆಯಲ್ಲಿ
ಕದ್ರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಾಹನವನ್ನು ತಡೆದಿದ್ದಾರೆ.
ಕಂಟೈನರ್ ಲಾರಿಯಲ್ಲಿ 35 ಜಾನುವಾರು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.