ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್‌ನ ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಿಂದ 4 ಮತ್ತು 5ನೇ ಮಹಡಿ ನಿರ್ಮಾಣ

ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್‌ನ ಎಂಆರ್‌ಪಿಎಲ್ ಸಿಎಸ್‌ಆರ್ ನಿಧಿಯಿಂದ 4 ಮತ್ತು 5ನೇ ಮಹಡಿ ನಿರ್ಮಾಣ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಮೆಡಿಸಿನ್ ಬ್ಲಾಕ್ ನಿರ್ಮಾಣದ ಸಂದರ್ಭದಲ್ಲಿ ಮೂಲ ಯೋಜನೆಯಂತೆ ನೆಲ ಅಂತಸ್ತು ಸೇರಿ ಐದು ಅಂತಸ್ತುಗಳ ನಕ್ಷೆ ತಯಾರಿಸಲಾಗಿದ್ದು, ಅನುದಾನದ ಲಭ್ಯತೆಯ ಮೇಲೆ ಮೂರು ಅಂತಸ್ತುಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. 

4ನೇ ಅಂತಸ್ತಿನಲ್ಲಿ ಸಿಎಸ್‌ಡಿ ವಿಭಾಗ ಮತ್ತು 52 ಹಾಸಿಗೆಗಳ ವಾರ್ಡ್, ಐದನೇ ಅಂತಸ್ತಿನಲ್ಲಿ 22 ಹಾಸಿಗೆಗಳ ವಾರ್ಡ್ ನಿರ್ಮಿಸಿ ಒಟ್ಟು 74 ಹಾಸಿಗೆಗಳ ವ್ಯವಸ್ಥೆ ಕಲ್ಪಸಲು ಯೋಜಿಸಲಾಗಿದೆ. 

ಈ ಕಾಮಗಾರಿಗೆ ಅಗತ್ಯವಿರುವ 10 ಕೋಟಿ ರೂ. ಅನುದಾನವನ್ನು ಎಂಆರ್‌ಪಿಎಲ್ ಸಂಸ್ಥೆಯು ನೀಡುವುದಾಗಿ ಧೃಡಪಡಿಸಿದ್ದು, ಹೊಸ ಕಟ್ಟಡದ ನಿರ್ವಹಣೆ ಮತ್ತು ಮಾನವ ಸಂಪನ್ಮೂಲ ಒದಗಿಸುವ ಜವಾಬ್ದಾರಿಯನ್ನು ಹಳೆಯ ಒಪ್ಪಂದದಂತೆ ಕೆಎಂಸಿ ಸಂಸ್ಥೆ ಪೂರೈಸಲು ಒಪ್ಪಿಗೆ ನೀಡಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲ ಆಗಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article