ಶಾಲಾ ಬಸ್‌ಗೆ ಢಿಕ್ಕಿ: 7 ವಿದ್ಯಾರ್ಥಿಗಳಿಗೆ ಗಾಯ
Monday, February 16, 2026
ಮಂಗಳೂರು: ಮಂಗಳೂರು ಹೊರವಲಯದ ಕಾಪಿಕಾಡು ಬಳಿ ಶಾಲಾ ಬಸ್‌ಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ 7 ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ.
ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್ಗೆ ಗೋವಾದಿಂದ ಕೇರಳದ ಕಡೆಗೆ ಹೊರಟಿದ್ದ ಮೀನು ಸಾಗಾಟದ ಕ್ಯಾಂಟರ್ ಹಿಂದಿನಿಂದ ಢಿಕ್ಕಿ ಹೊಡೆದೆದಿದೆ.
ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕ್ಯಾಂಟರ್ ಚಾಲಕ ಸಂಜೀವ್ ನಿದ್ರೆಯ ಮಂಪರಿನಲ್ಲಿದ್ದ ಎನ್ನಲಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.