ಪಿಲಿಕುಳದಲ್ಲಿ ಆಕಾಶ ವೀಕ್ಷಣೆ
Friday, February 20, 2026
ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಫೆ.21 ರಂದು ಸಂಜೆ 6.30 ರಿಂದ 8.30ರ ವರೆಗೆ ರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಕಾಣಲಿರುವ ಗುರು, ಶನಿ ಗ್ರಹಗಳಲ್ಲದೆ ಚಂದ್ರನ ಕುಳಿಗಳನ್ನು ಸಹ ವೀಕ್ಷಿಸಬಹುದು.
ವಿಜ್ಞಾನ ಕೇಂದ್ರದ ಆವರಣದಲ್ಲಿ ಇವುಗಳನ್ನು ದೂರದರ್ಶಕದ ಮೂಲಕ ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ನಕ್ಷತ್ರ ಮತ್ತು ನಕ್ಷತ್ರಪುಂಜಗಳನ್ನು ಗುರುತಿಸುವುದನ್ನು ಪರಿಚಯಿಸಲಾಗುತ್ತದೆ. ಬರಿಗಣ್ಣಿನಿಂದ ಇವುಗಳನ್ನು ನೋಡಬಹುದಾದರೂ ದೂರದರ್ಶಕದಿಂದ ನೋಡುವುದು ಬೇರೆಯೇ ಅನುಭವ ನೀಡುತ್ತದೆ. ಖಗೋಳಾಸಕ್ತರು ಈ ಮುಕ್ತ ಅವಕಾಶದ ಸದುಪಯೋಗ ಪಡೆದುಕೊಳ್ಳಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರ ಪ್ರಕಟನೆ ತಿಳಿಸಿದೆ.