ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘದಿಂದ ಡಾ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ
Friday, February 13, 2026
ಮಂಗಳೂರು: ಸಮುದ್ರದ ಅಪಾಯಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ತುರ್ತು ರಕ್ಷಣಾ ವ್ಯವಸ್ಥೆಯ ಅಗತ್ಯತೆಯನ್ನು ಮನಗಂಡು ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘ ‘ಬೋಟ್ ಆಂಬ್ಯುಲೆನ್ಸ್’ ಅನ್ನು ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ, ಈಚೆಗೆ ಲೋಕಾರ್ಪಣೆ ಮಾಡಿದೆ. ಇದರ ಪ್ರಯುಕ್ತ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಮಂಗಳವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.
ಉಳ್ಳಾಲ ವಲಯ ನಾಡ ದೋಣಿ ಮೀನುಗಾರರ ಸಂಘಕ್ಕೆ ಎಂ.ಎನ್. ರಾಜೇಂದ್ರ ಕುಮಾರ್ ಅವರು ನೀಡಿದ ಸಹಕಾರ ಹಾಗೂ ಸಂಘದ ಸದಸ್ಯರಿಗೆ ಈ ಹಿಂದೆ ನೀಡಿದ ಸಾಲ ಸೌಲಭ್ಯದ ಸಹಕಾರವನ್ನು ಸಂಘದ ಅಧ್ಯಕ್ಷ ಹನೀಫ್ ಸೋಲಾರ್ ಈ ಸಂದರ್ಭದಲ್ಲಿ ಸ್ಮರಿಸಿ ಅವರನ್ನು ಸನ್ಮಾನಿದರು.
ಈ ಸಂದರ್ಭದಲ್ಲಿ ಸಂಘದ ಸಲಹೆಗಾರ ಇಸ್ಮಾಯಿಲ್ ಕೋಡಿ ಸದಸ್ಯ ಮೊಹಮ್ಮದ್ ಉಪಸ್ಥಿತರಿದ್ದರು.