ಶಾಸಕ ಕಾಮತ್ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಶಾಸಕ ಕಾಮತ್ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ


ಮಂಗಳೂರು: ಮನಪಾ ವ್ಯಾಪ್ತಿಯ 27ನೇ ಬೋಳೂರು ವಾರ್ಡಿನ ಉರ್ವ ರಾಮ ಮಂದಿರದ ಬಳಿ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯ ಮೂಲಕ ನಡೆಯಲಿರುವ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನಿಕಟಪೂರ್ವ ಮನಪಾ ಸದಸ್ಯ ಜಗದೀಶ್ ಶೆಟ್ಟಿ ಬೋಳೂರು ಸಹಿತ ಸ್ಥಳೀಯ ಪ್ರಮುಖರ ವಿಶೇಷ ಮನವಿಯ ಮೇರೆಗೆ ಉರ್ವ ಮೈದಾನದ ಹಿಂಬದಿ ಇರುವ ಪುರಾತನ ರಾಮ ಮಂದಿರ ಹಾಗೂ ಕೊರಗಜ್ಜನ ಕ್ಷೇತ್ರದ ಈ ಪರಿಸರದಲ್ಲಿ ಮೇಲ್ಚಾವಣಿಯ ಕಾಮಗಾರಿಗೆ ಶಿಲನ್ಯಾಸ ನಡೆಸಲಾಗುತ್ತಿದೆ. ಶೀಘ್ರದಲ್ಲಿ ಇದರ ಕಾಮಗಾರಿ ಮುಗಿದು ಜನರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.

ಪ್ರಮುಖರಾದ ರಾಜೇಶ್ ಉರ್ವ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಹುಲ್ ಶೆಟ್ಟಿ, ಮಂಡಲದ ಉಪಾಧ್ಯಕ್ಷ ಕಿರಣ್ ರೈ, ಶಕ್ತಿಕೇಂದ್ರ ಅಧ್ಯಕ್ಷ ದಿನೇಶ್ ಕರ್ಕೇರ, ಉಮಾಶಂಕರ್, ಪುರಂದರ ಶೆಟ್ಟಿ, ಪದ್ಮನಾಭ ಪುತ್ರನ್, ರಾಧಾಕೃಷ್ಣ ಶೇಟ್, ಹರಿಶ್ಚಂದ್ರ, ಸಂದೀಪ್ ಕೋಟ್ಯಾನ್, ಶುಶಿತ್, ಅನಿಲ್ ಸುವರ್ಣ, ಅಜಯ್ ಸುವರ್ಣ, ಗಣೇಶ್ ಉರ್ವ, ಸಂತೋಷ್ ಶೆಟ್ಟಿ ಸೇರಿದಂತೆ ವಾರ್ಡಿನ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article