ಸಂಹಿತೆಗಳ ಜಾರಿಯಿಂದ ಯೂನಿಯನ್ ಮುಕ್ತ ಭಾರತ -ಕಾರ್ಮಿಕ ವರ್ಗ ಮತ್ತೆ ಗುಲಾಮಗಿರಿಯತ್ತ: ಫಣೀಂದ್ರ ಕೆ.
ಬ್ಯಾಂಕ್ ನೌಕರರ ರಾಜ್ಯ ಮುಖಂಡರಾದ ಬಿ ಎಂ ಮಾಧವರವರು ಮಾತನಾಡಿ, ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ಅಂಬಾನಿ ಅಧಾನಿಗಳು ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಗೆ ಮಾರಾಟ ಮಾಡುವ ಮೂಲಕ ಇಡೀ ದೇಶವನ್ನೇ ಅಂಬಧಾನಿ ಮಾಡಲು ಹೊರಟಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,ದೇಶದ 70%ಕ್ಕಿಂತಲೂ ಹೆಚ್ಚಿನ ಕಾರ್ಖಾನೆಗಳು ಕಾರ್ಮಿಕ ಸಂಹಿತೆಗಳಿಂದ ಹೊರಗುಳಿಯುವ ಮೂಲಕ 90% ದಷ್ಟು ಕಾರ್ಮಿಕರು ಯಾವುದೇ ಕಾನೂನಿನ ರಕ್ಷಣೆಯಿಲ್ಲದೆ ಬೀದಿಪಾಲಾಗಲಿದ್ದಾರೆ ಮಾತ್ರವಲ್ಲದೆ ಅವರನ್ನು ಗುಲಾಮರಂತೆ ದುಡಿಸಿ ಅವರ ಶ್ರಮವನ್ನು ದೋಚಲಾಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ CITU ಜಿಲ್ಲಾ ನಾಯಕರಾದ ಬಿ ಎಂ ಭಟ್, ವಸಂತ ಆಚಾರಿ,ಯೋಗೀಶ್ ಜಪ್ಪಿನಮೊಗರು, ವಸಂತಿ, ಲೋಲಾಕ್ಷಿ, ರೋಹಿದಾಸ್, ರವಿಚಂದ್ರ ಕೊಂಚಾಡಿ, ಜಯಲಕ್ಷ್ಮಿ, ಜಯಶ್ರೀ, AITUC ಜಿಲ್ಲಾ ಮುಖಂಡರಾದ ಸೀತಾರಾಮ ಬೇರಿಂಜ, ಬಿ ಶೇಖರ್, ವಿ ಕುಕ್ಯಾನ್, ಎಚ್ ವಿ ರಾವ್, ಸುಧಾಕರ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಪುರುಷೋತ್ತಮ ಪೂಜಾರಿ, ವಿಮಾ ನೌಕರರ ಸಂಘಟನೆಯ ನಾಯಕರಾದ ಬಿ ಎನ್ ದೇವಾಡಿಗ, ಅಲ್ಬನ್ ಮಸ್ಕರೇನಸ್, ವಸಂತ ಕುಮಾರ್, ಹೋಟೇಲ್ ನೌಕರರ ಸಂಘದ ನಾಯಕರಾದ ಮೋಹನ್, ಕಿರಣ್ ರಾಜ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಫ್ಲೇವಿಕ್ರಾಸ್ತಾ, ಯೋಗಿತಾ, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಹಸನ್ ಕುದ್ರೋಳಿ, ಸಿಕಂದರ್, ಹಂಝ, ಗುಡ್ಡಪ್ಪ, ಶಿವಪ್ಪ, ನೌಷಾದ್, ವಿಜಯ, ಯುವಜನ ನಾಯಕರಾದ ಅಭಿಷೇಕ್, ವಿದ್ಯಾರ್ಥಿ ನಾಯಕರಾದ ವಿನುಷ ರಮಣ ಮುಂತಾದವರು ಉಪಸ್ಥಿತರಿದ್ದರು

