ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿರುವ ಲ್ಯಾಬೋರೇಟರಿ: ಆರೋಪ
ಮಂಗಳೂರು: ವಿಟ್ಲದ ಚಂದಳಿಕೆ ಪರಿಸರದ ಲ್ಯಾಬೋರೇಟರಿಯೊಂದರಲ್ಲಿ ನೀಡಲಾದ ರಕ್ತ ಪರೀಕ್ಷಾ ವರದಿಯಲ್ಲಿ (CBC Report) ಪ್ಲೇಟ್ಲೆಟ್ ಸಂಖ್ಯೆ ಅಸಹಜವಾಗಿ ವ್ಯತ್ಯಾಸವಾಗಿದ್ದು, ರೋಗಿಯ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಕಿಯಾನ್ಸ್ ಹರ್ಬಲ್ ಸೆಂಟರ್ ಮಾಲಕ ಶರತ್ ಶೆಟ್ಟಿ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ವಿಟ್ಲ ಮತ್ತು ಕಬಕ ಮಧ್ಯವಿರುವ ಚಂದಳಿಕೆ ಪರಿಸರದಲ್ಲಿರುವ ಲ್ಯಾಬೊರೇಟರಿನಲ್ಲಿ CBC ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ ಸಮಯ ಸುಮಾರು 10 ಗಂಟೆ 50 ನಿಮಿಷ ಬೆಳಗ್ಗೆ ಅದರ ಸಂಪೂರ್ಣ ರಿಪೋರ್ಟ್ ನನಗೆ ಬೆಳಗ್ಗೆ 11:03ಕ್ಕೆ ಈ ನಂಬರ್ 7259510489ನಿಂದ ವಾಟ್ಸಪ್‌ನಲ್ಲಿ ರಿಪೋರ್ಟ್ ನೀಡಿದ್ದಾರೆ ಆ ರಿಪೋರ್ಟ್ ನಲ್ಲಿ ಹಿಮೋಗ್ಲೋಬಿನ್ 14 ತೋರಿಸುತ್ತಿದೆ ಹಾಗೆಯೇ ಪ್ಲೇಟೆಟ್ 18000 ತೋರಿಸುತ್ತಿದೆ. ಆ ರಿಪೋರ್ಟ್ ಅನ್ನು ನೋಡಿ ಕೂಡಲೇ ಲ್ಯಾಬೋರೇಟರಿಗೆ ಕರೆ ಮಾಡಿ ನೀವು ಮಾಡಿರುವಂತಹ ರಿಪೋರ್ಟ್ ಸರಿ ಇದೆಯೇ ಎಂದು ಕೇಳಿದಾಗ ಅಲ್ಲಿಯ ಸಿಬ್ಬಂದಿ ನಾವು ಮಾಡಿರುವಂತಹ ರಿಪೋರ್ಟ್ ಸರಿ ಇದೆ ನೀವು ಬೇರೆ ಎಲ್ಲಿ ಸಹ ಮಾಡಿಸಿ ತೊಂದರೆ ಇಲ್ಲ ನಾನು ನನ್ನ ವೈದ್ಯರಲ್ಲಿ ತೋರಿಸಿ ನಿಮಗೆ ನಾನು ಈ ರಿಪೋರ್ಟ್ ವಾಟ್ಸಾಪ್ ಮುಖಾಂತರ ಕಳಿಸಿದ್ದೇನೆ. ನನಗೆ ಈ ರಿಪೋರ್ಟ್ ನೋಡಿ ಅತಿ ಹೆಚ್ಚು ವ್ಯತ್ಯಾಸ ಕಂಡು ಬಂದಿದ್ದು ನಾನು ಕೂಡಲೇ ವಿಟ್ಲದಲ್ಲಿರುವ ಬೆಳಗ್ಗೆ 11:30ಕ್ಕೆ ಧನ್ವಂತರಿಯಲ್ಲಿ ಪ್ಲೇಟ್ಲೆಟ್ ರಕ್ತ ಪರೀಕ್ಷೆಯನ್ನು ಮಾಡಿಸಿದ್ದೇನೆ” ಎಂದರು. ಆ ರಿಪೋರ್ಟ್ ನಲ್ಲಿ ನನಗೆ ಗಿಛಿಚಿಡಿe ಟಚಿboಡಿಚಿಣoಡಿಥಿ ಯಲ್ಲಿ 1 ಲಕ್ಷ ಮತ್ತು ಧನ್ವಂತರಿ ಲ್ಯಾಬೋರೇಟರಿಗೆ ಯಲ್ಲಿ 1.13 ಲಕ್ಷ ತೋರಿಸಿದೆ ಸರಿಯಾದ ಮಾಹಿತಿ ಸಿಕ್ಕಿದ್ದು ಅದನ್ನು ನೋಡಿ ನಾನು ಹಿಂತಿರುಗಿ ಲ್ಯಾಬೋರೇಟರಿಗೆ ಬಂದು ಕೇಳಿದೆ ನನ್ನ ರಿಪೋರ್ಟ್ ಗೆ ಸಹಿ ಹಾಕಿ ಕೊಡಿ ಎಂದು ಕೇಳಿದಾಗ ಅಲ್ಲಿಯ ವೈದ್ಯರು ನನ್ನಲ್ಲಿ ಅವರು ನನ್ನಲ್ಲಿ ಹೇಳಿದ್ದಾರೆ ನಾವು ವಿಟ್ಲದಲ್ಲಿ ಕ್ಲಿನಿಕ್ ಮಾಡಲು ಟಿ ಹೆಚ್ ಓ ಹಾಗೂ ಡಿ ಹೆಚ್ ಓ ಅವರನ್ನು ಸೆಟ್ಟಿಂಗ್ ಮಾಡಿದ್ದೇವೆ ನೀವು ಯಾರಿಗೆ ಬೇಕಾದರೂ ಕಂಪ್ಲೆಂಟ್ ಮಾಡಿ ನಾವು ಹೆದರಲ್ಲ ಎಂದು ಹೇಳಿದ್ದಾರೆ ಎಂದು ಆರೋಪಿಸಿದರು.
ಈ ಕುರಿತಂತೆ ಸಂಬಂಧಿತ ಅಧಿಕಾರಿಗಳಿಗೆ ನೀಡಿದ ದೂರಿಗೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡು ರಕ್ಷಾ ಕ್ಲಿನಿಕ್ ಅಂಡ್ ಲ್ಯಾಬೋರೇಟರಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಬಂದ್ ಮಾಡದಿದ್ದರೆ ಶಿಫಾರಸ್ಸು ಮಾಡಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.