ಜಿಲ್ಲೆಯಲ್ಲಿ ಕನ್ನಡ ಸೇನೆ ಆಸ್ತಿತ್ವಕ್ಕೆ
ಮಂಗಳೂರು: ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ. ನೂತನ ಪದಾಽಕಾರಿಗಳನ್ನು ನೇಮಿಸಿ, ಜಿಲ್ಲಾ ಘಟಕ ರಚಿಸಲಾಗಿದೆ ಎಂದು ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಎನ್. ನಾಗೇಂದ್ರ ತಿಳಿಸಿದರು.
ಜಿಲ್ಲಾ ಅಧ್ಯಕ್ಷರಾಗಿ ರತ್ನಾಕರ್ ಸುವರ್ಣ ಜಪ್ಪು, ಉಪಾಧ್ಯಕ್ಷರಾಗಿ ಎನ್. ನಾಗೇಂದ್ರ, ಜಿಲ್ಲಾ ಸಂಚಾಲಕರಾಗಿ ಮೊಹಮ್ಮದ್ ಸುನೈ- ಅಬ್ದುಲ್ಲ ಡೆಂಜಿಪಾಡಿ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಎಂ.ಎಸ್., ಜಂಟಿ ಕಾರ್ಯದರ್ಶಿಯಾಗಿ ಸಾಹಸ್, ಖಜಾಂಚಿಯಾಗಿ ಸತೀಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಘಟಕ ರಚಿಸಲಾಗುವುದು. ಕನ್ನಡ ಸೇನೆಗೆ ಒಂದು ಸಾವಿರ ಸದಸ್ಯರ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಆಸಕ್ತರು ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಬಳಿಯ ಸಂಗಮ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿರುವ ಕನ್ನಡ ಸೇನೆ ಕರ್ನಾಟಕ ದ.ಕ. ಜಿಲ್ಲಾ ಕಚೇರಿ ಸಂಪರ್ಕಿಸಬಹುದು ಎಂದರು.
ದಕ್ಷಿಣ ಕನ್ನಡದಲ್ಲಿ ಕನ್ನಡ ನಾಮ-ಲಕ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿರುವುದು ಸ್ವಾಗತಾರ್ಹ. ಯಾವುದೇ ಭಾಷೆಗೆ ನಾವು ವಿರೋಧವಿಲ್ಲ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಽಕೃತ ಭಾಷೆಯನ್ನಾಗಿಸಲು ಕನ್ನಡ ಸೇನೆ ಬೆಂಬಲ ನೀಡಲಿದೆ ಎಂದರು.
ಜಿಲ್ಲಾಧ್ಯಕ್ಷ ರತ್ನಾಕರ ಸುವರ್ಣ ಜಪ್ಪು, ಜಿಲ್ಲಾ ಪದಾಽಕಾರಿಗಳಾದ ಮೊಹಮ್ಮದ್ ಸುನೈಫ್ ಅಬ್ದುಲ್ಲ ಡೆಂಜಿಪಾಡಿ, ರಾಘವೇಂದ್ರ ಎಂ.ಎಸ್, ಸತೀಶ್ ಶೆಟ್ಟಿ, ಸದಸ್ಯರಾದ ಎ.ಜೆ. ಹ್ಯಾರಿ ಲೋಬೊ, ಪ್ರವೀಣ್ ಉಪಸ್ಥಿತರಿದ್ದರು.