ಮಂಗಳೂರು ದಕ್ಕೆಯಲ್ಲಿ ಕಾರ್ಮಿಕನ ದುರ್ಮರಣ: ಸಿಐಟಿಯು ತೀವ್ರ ಆಕ್ರೋಶ

ಮಂಗಳೂರು ದಕ್ಕೆಯಲ್ಲಿ ಕಾರ್ಮಿಕನ ದುರ್ಮರಣ: ಸಿಐಟಿಯು ತೀವ್ರ ಆಕ್ರೋಶ

ಮಂಗಳೂರು: ಮಂಗಳೂರು ಮಿನುಗಾರಿಕಾ ದಕ್ಕೆಯಲ್ಲಿ ಹಳೆಯ ಲೈಟ್ ಕಂಬ ಕುಸಿದು ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಅವರು ಮೃತಪಟ್ಟಿರುವುದು ಸಾಮಾನ್ಯ ಅಪಘಾತವಲ್ಲ, ಇದು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸಂಭವಿಸಿದ ಕಾರ್ಮಿಕನ ಘೋರ ಹತ್ಯೆ ಎಂದು ಕೇಂದ್ರ ಕಾರ್ಮಿಕ ಸಂಘಟನೆ ಯಾದ CITU ದ.ಕ. ಜಿಲ್ಲಾ ಸಮಿತಿಯು ತೀಕ್ಷ್ಣವಾಗಿ ಆರೋಪಿಸಿದೆ.

ಹಲವು ವರ್ಷಗಳ ಕಾಲ ದಕ್ಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಹಳೆಯ, ತುಕ್ಕು ಹಿಡಿದ ಕಂಬಗಳ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಸಂಬಂಧಿತ ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು ಕಿವಿಗೊಡದೇ ಇದ್ದುದ್ದರ ಪರಿಣಾಮವಾಗಿ ಇಂದು ಒಬ್ಬ ಕಾರ್ಮಿಕನ ಪ್ರಾಣವನ್ನು ಕಸಿದುಕೊಂಡಿದೆ. ಮುರುಗನ್ ಅವರು ಮೀನು ಹೊತ್ತು ಬಂದು ಕುಳಿತಿದ್ದ ಸಂದರ್ಭದಲ್ಲೇ ಕಂಬ ಕುಸಿದು ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ. ಇದು ನೇರವಾಗಿ ಜಿಲ್ಲಾಡಳಿತದ ವೈಫಲ್ಯವಾಗಿದೆ.

ದಕ್ಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ, ಆರೋಗ್ಯ, ವಿಮೆ, ತುರ್ತು ಚಿಕಿತ್ಸಾ ವ್ಯವಸ್ಥೆ—ಇವುಗಳ ಬಗ್ಗೆ ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲದೆ ಕಾರ್ಮಿಕರನ್ನು ಅಪಾಯದ ಮಧ್ಯೆ ದುಡಿಯಲು ಬಲವಂತಪಡಿಸಲಾಗುತ್ತಿದೆ. ಕಾರ್ಮಿಕರ ಜೀವದ ಬೆಲೆಯನ್ನು ಲೆಕ್ಕಿಸದ ಈ ಅಮಾನುಷ ವ್ಯವಸ್ಥೆಯನ್ನು ಸಿಐಟಿಯು ತೀವ್ರವಾಗಿ ಖಂಡಿಸುತ್ತದೆ.ಮೃತ ಮುರುಗನ್ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು.

ದಕ್ಕೆಯ ಸಂಪೂರ್ಣ ಸುರಕ್ಷತಾ ಪರಿಶೀಲನೆ ನಡೆಸಿ ಅಪಾಯಕಾರಿ ಕಂಬಗಳನ್ನು ಬದಲಾಯಿಸಬೇಕು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದಕ್ಕೆಯಲ್ಲಿ ದುಡಿಯುವ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿ, ವಿಮೆ ಮತ್ತು ಸುರಕ್ಷತಾ ಭದ್ರತೆ ಕಡ್ಡಾಯಗೊಳಿಸಬೇಕು.ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತೀವ್ರವಾದ ಹೋರಾಟವನ್ನು ನಡೆಸುವುದು ಅನಿವಾರ್ಯವಾಗಲಿದೆ ಎಂದು CITU ದ.ಕ. ಜಿಲ್ಲಾ ಸಮಿತಿಯು ಎಚ್ಚರಿಕೆ ನೀಡುತ್ತದೆ ಎಂದು CITUನ ದ.ಕ. ಜಿಲ್ಲಾ ಸಮಿತಿಯ ಖಜಾಂಚಿ ಯೋಗೀಶ್ ಜಪ್ಪಿನಮೊಗರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article