ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪ್ರಧಾನ ಸಮಾರಂಭ
ಎಕ್ಸ್‌ಪರ್ಟ್ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಸಾಧನೆಗೆ ಎಂದಿಗೂ ಕೊನೆ ಎಂಬುವುದಿಲ್ಲ. ಪ್ರತಿಭೆ, ಪರಿಶ್ರಮದ ಜತೆಗೆ ಗುರಿ ಸಾಧಿಸುವ ಅಚಲತೆಯಿಂದ ಮಾತ್ರ ಸಾಧಕರಾಗಬಹುದು. ಪ್ರತಿಯೊಬ್ಬರೂ ಅಸಾಮಾನ್ಯರಾಗಲು ಬಯಸುತ್ತಾರೆ. ಆದರೆ ಅಸಾಮಾನ್ಯರಾಗಲು ಅಷ್ಟೇ ಪರಿಶ್ರಮದ ಅಗತ್ಯವಿದೆ. ಜತೆಗೆ ಪದವಿ ಪ್ರದಾನ ಕಾರ್ಯಕ್ರಮಗಳು ಪ್ರಮಾಣಪತ್ರ ನೀಡುವುದಕ್ಕೆ ಮಾತ್ರವಲ್ಲ ಅದು ಗುರಿಯನ್ನು ಸಮರ್ಥವಾಗಿ ನಿರ್ಧರಿಸುವ ವೇದಿಕೆಯೂ ಆಗಿದೆ ಎಂದರು.
ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಶಿವಶರಣ ಶೆಟ್ಟಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಿನ ಪ್ರಮಾಣದಲ್ಲಿದೆ. ಅದಕ್ಕೆ ತಕ್ಕಂತೆ ನಾವು ಅಪ್‌ಡೇಟ್ ಆಗಲೇಬೇಕು. ಇಲ್ಲದೇ ಹೋದರೆ ಔಟ್‌ಡೇಟ್ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇದಕ್ಕಾಗಿ ನಿರಂತರ ಓದುವ ಕಲೆಯನ್ನು ಸಿದ್ಧಿಸಿಕೊಳ್ಳಿ. ಪ್ರತಿಕ್ಷಣವೂ ಹೊಸ ವಿಚಾರ, ತಂತ್ರಜ್ಞಾನದ ಕುರಿತು ಜ್ಞಾನ ಬೆಳೆಸಿಕೊಳ್ಳಿ. ಇಂದಿನ ವಿಚಾರಗಳು ನಾಳೆಗೆ ಹಳೆಯದಾಗಬಹುದು ಅಥವಾ ಇಲ್ಲದೇ ಹೋಗಬಹುದು. ಆದರೆ ಓದುವುದು, ಕೇಳುವುದು ಹಾಗೂ ಅಪ್‌ಡೇಟ್ ಆಗಿರುವುದರಿಂದ ಮಾತ್ರ ಬದುಕಿನಲ್ಲಿ ಯಶಸ್ಸು ಪಡೆಯುತ್ತೀರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಗಣಪತಿ ಪಿ. ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಜತೆ ಹೆಚ್ಚು ಸಮಯ ವ್ಯಯ
ಮಾಡಬೇಡಿ. ಬದುಕು ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸುವ ರೀಲ್ಸ್ ಅಥವಾ ಇತರ ವಿಚಾರಗಳಿಗಿಂತ ಪೂರ್ಣ ಭಿನ್ನವಾಗಿರುತ್ತದೆ. ವೃತ್ತಿಗೆ ಸೇರಿಕೊಂಡಾಗ ತಮ್ಮ ವೇತನದಲ್ಲಿ ಉಳಿಸುವ ಕೆಲಸ ಮಾಡಿಕೊಂಡು ದೇಶಕ್ಕೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಎಂದರು.
ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರದಿ ಮಂಡಿಸಲಾಯಿತು. ಸಾಧಕ ಹಾಗೂ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಗಣ್ಯರು ಗೌರವಿಸಿದರು. ಸಹಾಯಕ ಪ್ರಾಧ್ಯಾಪಕಿ ಶರಣ್ಯ ಅಮೀನ್ ರ‍್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು.
ಮಂಗಳಾ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಅನಿತಾ ಜಿ. ಭಟ್, ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಆಂಡ್ ಸ್ಕೂಲ್ ಆಫ್ ನರ್ಸಿಂಗ್ ಪ್ರಿನ್ಸಿಪಾಲ್ ಪ್ರೊ. ಸುಬ್ರಹ್ಮಣ್ಯ ನಾಯಕ್, ಮಂಗಳಾ ಕಾಲೇಜ್ ಆಫ್ ಫ್ಯಾರಾ ಮೆಡಿಕಲ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಿನ್ಸಿಪಾಲ್ ಪ್ರೊ. ಪ್ರತಿಜ್ಞಾ ಸುವಾಸಿನಿ ಜಿ.ಆರ್., ಮಂಗಳಾ ಕಾಲೇಜ್ ಆಫ್ ಪ್ಯಾರಾ ಮೆಡಿಕಲ್ ಆಂಡ್ ಅಲೈಡ್ ಹೆಲ್ತ್ ಸೈನ್ಸಸ್‌ನ ವೈಸ್ ಪ್ರಿನ್ಸಿಪಾಲ್ ಪ್ರೊ. ಗೀತಾಲಕ್ಷ್ಮಿ, ಮಂಗಳಾ ಕಾಲೇಜ್ ಆಫ್ ಪಿಸಿಯೋಥೆರಪಿಯ ಪ್ರೊ. ಡಾ. ಭರತ್ ಕೆ.ಎಚ್. ಉಪಸ್ಥಿತರಿದ್ದರು.