ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕಾಮತ್

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕಾಮತ್


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ಪದವು ಪಶ್ಚಿಮ ವಾರ್ಡಿನ ಶ್ರೀ ಕೃಷ್ಣ ಭಜನಾ ಮಂದಿರ ಟ್ರಸ್ಟ್ (ರಿ.) ತಿಂಪೈ ಕಾಲೋನಿ, ಕಾನಡ್ಕ ಶಕ್ತಿನಗರ ಬಳಿ 10 ಲಕ್ಷ ರೂ.ನ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ನೆರವೇರಿಸಿದರು.


ಬಳಿಕ ಅವರು ಮಾತನಾಡಿ, ಇಲ್ಲಿನ ಕೃಷ್ಣ ಭಜನಾ ಮಂದಿರವು ಹಲವಾರು ವರ್ಷಗಳಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಇಂತಹ ಪರಿಸರದಲ್ಲಿ ಅಭಿವೃದ್ಧಿಯಾಗಬೇಕು ಎಂಬ ಹಲವರ ಮನವಿ ಮೇರೆಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಮುಗಿಯುವ ಭರವಸೆಯಿದೆ ಎಂದು ಹೇಳಿದರು.

ಪಾಲಿಕೆಯ ನಿಕಟಪೂರ್ವ ಪಾಲಿಕೆ ಸದಸ್ಯರುಗಳಾದ ವನಿತಾ ಪ್ರಸಾದ್‌, ಶಕೀಲಾ ಖಾವಾ, ವಿ.ಎಚ್.ಪಿ ಮುಖಂಡ ಎಚ್.ಕೆ. ಪುರುಷೋತ್ತಮ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್, ಪ್ರಮುಖರಾದ ರವಿಚಂದ್ರ, ಸುಂದರ್ ಅಂಚನ್, ವಿನೋದ್ ಮುಗ್ರೋಡಿ, ಶುಭಕರ, ಅವಿನಾಶ್ ಅಂಚನ್, ಕೇಶವ, ಡಾ. ಚಂದ್ರಶೇಖರ, ಅಶೋಕ್ ನಾಯಕ್, ಪ್ರಸಾದ್ ಶಕ್ತಿನಗರ, ಗಣೇಶ್, ವಿಜಯ್ ಶೆಣೈ, ಕಿಶನ್, ಶಿವಪ್ಪಣ್ಣ, ಅಮೃತ ಟೀಚರ್, ಲತಾ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article