ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ

ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕಾಮತ್ ಗುದ್ದಲಿಪೂಜೆ


ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 51ನೇ ಅಳಪೆ ಉತ್ತರ ವಾರ್ಡಿನ ವಿಠಲ್ ಕುಲಾಲ್ ಮನೆ ಸಹಿತ ವಿವಿಧೆಡೆ 40 ಲಕ್ಷ ರೂ. ವಿಶೇಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು, ಶಾಸಕ ವೇದವ್ಯಾಸ ಕಾಮತ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. 


ಬಳಿಕ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಅಗತ್ಯವಿರುವ ಅನೇಕ ಅನುದಾನಗಳನ್ನು ಮಂಜೂರುಗೊಳಿಸಲಾಗಿತ್ತು. ಆದರೆ ರಾಜ್ಯದಲ್ಲಿ ಸರಕಾರ ಬದಲಾದ ನಂತರ ಎಲ್ಲಾ ಅನುದಾನಗಳಿಗೆ ತಡೆ ನೀಡಿದ್ದು ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಇದೇ ವಿಚಾರವಾಗಿ ಹಲವು ಬಾರಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ವಿವರಿಸಿದ ಪರಿಣಾಮ ಇದೀಗ ತಡೆ ಹಿಡಿಯಲಾಗಿದ್ದ ಅನುದಾನಗಳನ್ನು ಮತ್ತೆ ಬಿಡುಗಡೆಗೊಳಿಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಯುವಂತಾಗಲಿ ಎಂದು ಹೇಳಿದರು.

ಪಾಲಿಕೆಯ ನಿಕಟಪೂರ್ವ ಸದಸ್ಯೆ ರೂಪಶ್ರೀ ಪೂಜಾರಿ, ಮಹಾಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷ ಪ್ರವೀಣ್ ನಿಡ್ಡೇಲ್, ಮಹಾಶಕ್ತಿ ಕೇಂದ್ರದ ಸಹ ಸಂಚಾಲಕ ರಾಮ್ ಪ್ರಸಾದ್, ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಆಚಾರ್, ಪ್ರಮುಖರಾದ ಸುರೇಶ್ ಕನ್ನಗುಡ್ಡ, ದೀಕ್ಷಿತ್ ಕನ್ನಗುಡ್ಡ, ಕಿಶೋರ್ ಕನ್ನಗುಡ್ಡ, ಗಾಯತ್ರಿ ಕನ್ನಗುಡ್ಡ, ಶಿಲ್ಪ, ನಿರ್ಮಲ, ಗಣೇಶ್, ಅರುಣ್, ಸುಮತಿ, ವಿಠ್ಠಲ್ ಕುಲಾಲ್, ಭರತ್, ವಿಜಯ್, ಭಾಸ್ಕರ ಕೋಟ್ಯಾನ್, ಗೆಳೆಯರ ಬಳಗದ ಎಲ್ಲಾ ಸದಸ್ಯರ ಸಹಿತ ಅನೇಕ ಸ್ಥಳೀಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article