ಕಾಲೇಜು ವಿದ್ಯಾರ್ಥಿನಿಯರಿಗೆ ಸ್ತನ ಕ್ಯಾನ್ಸರ್ ಜಾಗೃತಿ

ಕಾಲೇಜು ವಿದ್ಯಾರ್ಥಿನಿಯರಿಗೆ ಸ್ತನ ಕ್ಯಾನ್ಸರ್ ಜಾಗೃತಿ


ಮಂಗಳೂರು: ಬಿಐ ಲೈಫ್ ಇನ್ಶೂರನ್ಸ್ ವತಿಯಿಂದ ನಗರದ ಸೆಂಟ್ ಆಗ್ನೇಸ್ ಕಾಲೇಜಿನಲ್ಲಿ  ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವ ರಕ್ಷಣೆ ಮತ್ತು ಸಬಲೀಕರಣದ ಉದ್ದೇಶದ ’ಥ್ಯಾಂಕ್ಸ್ ಎ ಡಾಟ್’ ಅಭಿಯಾನ ಅಂಗವಾಗಿ ಈ ಸಂವಾದ ಹಮ್ಮಿಕೊಳ್ಳಲಾಗಿತ್ತು.

ಈ ಉಪಕ್ರಮದಡಿ ದೇಶದಾದ್ಯಂತದ ಕಾಲೇಜು  ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಸ್ತನ ಆರೋಗ್ಯವನ್ನು ಮನೆ - ಮನೆಗಳಲ್ಲಿ ಸಹಜ ರೀತಿಯಲ್ಲಿ ಚರ್ಚಿಸುವ ವಿಷಯವನ್ನಾಗಿ ಬದಲಾಯಿಸಲು ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವ ಆರೈಕೆಯ ಕುರಿತು ಪೂರ್ವಭಾವಿ ಚರ್ಚೆ ನಡೆಸುವುದನ್ನು ಪ್ರೋತ್ಸಾಹಿಸಲು ಈ ಉಪಕ್ರಮವು  ಉದ್ದೇಶಿಸಿದೆ.

ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಸುಮಾರು 250 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದರು. ಎಸ್‌ಬಿಐ ಲೈಫ್‌ನ ಬ್ರ್ಯಾಂಡ್, ಕಾರ್ಪೊರೇಟ್ ಸಂವಹನ ಮತ್ತು ಸಿಎಸ್‌ಆರ್ ಮುಖ್ಯಸ್ಥ ರವೀಂದ್ರ ಶರ್ಮಾ ಮತ್ತು ಮಂಗಳೂರಿನ ಕ್ಯಾನ್‌ಕ್ಯೂರ್ ಆಂಕೊಲಾಜಿ ಕ್ಲಿನಿಕ್‌ನ ಕ್ಯಾನ್ಸರ್‌ತಜ್ಞ ಡಾ. ವಿನಯ್ ಕುಮಾರ್ ರಾಜೇಂದ್ರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸರಳ ವಿಧಾನದ ಮಾಹಿತಿ ನೀಡಿದರು. ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಮುಂಚಿನ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸುವುದು, ಸಾಮಾಜಿಕ ನಿಷೇಧಗಳನ್ನು ಉಲ್ಲಂಘಿಸುವುದು ಮತ್ತು  ಆರೋಗ್ಯ ರಕ್ಷಣೆಯ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಒಳನೋಟ ನೀಡಿದ  ಅರ್ಥಪೂರ್ಣ ಚರ್ಚೆಯಲ್ಲಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲರಾದ ಸಿಸ್ಟರ್  ಡಾ. ಎಂ. ವೆನಿಸ್ಸಾ ಎಸಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article