ಜೆಇಇ ಮೈನ್ಸ್–1ರ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳ ಅಭೂತಪೂವ೯ ಸಾಧನೆ
Tuesday, February 17, 2026
ಮೂಡುಬಿದಿರೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ಸ್–1ರ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆ ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ದಾಖಲಿಸಿದ್ದಾರೆ.
ಈ ಬಾರಿ ಕಾಲೇಜಿನ 23 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೈಂಟೈಲ್‌ಗಿಂತ ಹೆಚ್ಚು ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿ ತನ್ಮಯಿ ಎ. ಕೋಟಿ ಭೌತಶಾಸ್ತ್ರದಲ್ಲಿ 99.935079 ಪರ್ಸೈಂಟೈಲ್ (ಒಟ್ಟಾರೆ 98.81287 ಪರ್ಸೆಂಟೈಲ್) ಪಡೆದು ಮೆಚ್ಚುಗೆ ಪಡೆದಿದ್ದಾರೆ. ರಾಹುಲ್ ಪಿ. ಗೌಡ ಭೌತಶಾಸ್ತ್ರದಲ್ಲಿ 99.69311 ಪರ್ಸೈಂಟೈಲ್ (ಒಟ್ಟಾರೆ 98.61339 ಪರ್ಸೆಂಟೈಲ್) ಗಳಿಸಿದ್ದಾರೆ. ತನುಷ್ ಪಾಟೀಲ್ ರಸಾಯನಶಾಸ್ತ್ರದಲ್ಲಿ 99.19293 ಪರ್ಸೈಂಟೈಲ್ (ಒಟ್ಟಾರೆ 99.59924 ಪರ್ಸೆಂಟೈಲ್) ಪಡೆದು ಕಾಲೇಜಿನ ಪ್ರಮುಖ ಸಾಧಕರಾಗಿ ಹೊರಹೊಮ್ಮಿದ್ದಾರೆ.
ಇದಲ್ಲದೆ ಭರತ್ ಆನಂದ್ (99.72912), ಹರ್ಷ ಆರ್. (99.16404), ಸಾತ್ವಿಕ ದತ್ತ ಬೋಯ (99.40384), ರಚನಾ ಎಸ್.ಎಂ. (99.55428), ಶ್ಲೋಕ್ ರಾಘವೇಂದ್ರ ರಾವ್ (99.08979), ಹೇಮ ಯು. (99.58073), ಈಶ್ವರ್ ಪಿ. ಕೊಪ್ಪಳ್ (99.91653), ನಿಖಿಲ್ ಎಸ್.ಎಸ್. (99.82356), ಚಿನ್ಮಯ್ ಜಿ. ಬೆಳ್ಳೂರು (99.77329), ಯಶ್ವಂತ್ ಕೆ. (99.91971), ಗುರುಚರಣ್ ಎಂ. ಶೆಟ್ಟಿ (99.87536), ಧ್ರುವಂತ್ ಕೆ. (99.68378), ಪಾರ್ವತ್ ಗೌಡ ಪಾಟೀಲ್ (99.68531), ಎಸ್.ಜಿ. ಸುಮನ್ (99.13222), ದೀರಜ್ (99.22020), ಆರುಷ್ (99.34371), ಆರುಷ್ ಪಾರೆ ಸುರೇಶ್ (99.34446) ಸೇರಿದಂತೆ ಹಲವರು 99 ಪರ್ಸೈಂಟೈಲ್ ಮೀರಿದ ಅಂಕಗಳನ್ನು ಗಳಿಸಿದ್ದಾರೆ.
ಒಟ್ಟು 146 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಹೆಚ್ಚು, 14 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಹೆಚ್ಚು, 30 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಹೆಚ್ಚು ಹಾಗೂ 73 ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ.
ವಿಷಯವಾರು ಫಲಿತಾಂಶದಲ್ಲೂ ವಿದ್ಯಾರ್ಥಿಗಳು ಮಿಂಚಿದ್ದಾರೆ. ಭೌತಶಾಸ್ತ್ರದಲ್ಲಿ 15 ವಿದ್ಯಾರ್ಥಿಗಳು, ರಸಾಯನಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು ಹಾಗೂ ಗಣಿತಶಾಸ್ತ್ರದಲ್ಲಿ 4 ವಿದ್ಯಾರ್ಥಿಗಳು 99 ಪರ್ಸೈಂಟೈಲ್‌ಗಿಂತ ಅಧಿಕ ಅಂಕ ಗಳಿಸಿರುವುದು ವಿಶೇಷವಾಗಿದೆ.
ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ನಿರ್ದೇಶಕ ಡಾ. ಪ್ರಾಶಾಂತ್ ಹೆಗ್ಡೆ, ಜೆಇಇ ವಿಭಾಗದ ಮುಖ್ಯಸ್ಥ ವಿ. ಅರುಣ್ ಹಾಗೂ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ಸಾಧನೆಗಳಿಗೆ ಶುಭ ಹಾರೈಸಿದ್ದಾರೆ.



















