ಫೆ.18ರಿಂದ ನಡ್ಯೋಡಿ ದೈವಸ್ಥಾನದ ನೇಮೋತ್ಸವ

ಫೆ.18ರಿಂದ ನಡ್ಯೋಡಿ ದೈವಸ್ಥಾನದ ನೇಮೋತ್ಸವ

ಮೂಡುಬಿದಿರೆ: ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.18 ರಿಂದ ಫೆ.21 ರವರೆಗೆ ಮಾರೂರು-ಖಂಡಿಗ ಶ್ರೀ ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ನಡೆಯಲಿದೆ.

ಫೆ.18ರಂದು ಬುಧವಾರ ಸಂಜೆ ಗಂಟೆ 5ಕ್ಕೆ ಭಂಡಾರಕೊಟ್ಟಿಗೆ ಗುತ್ತಿನಲ್ಲಿರುವ ಭಂಡಾರ ಕೊಟ್ಟಿಗೆಯಿಂದ ಭಂಡಾರ ಹೊರಡುವುದು. ರಾತ್ರಿ 8ಕ್ಕೆ ಧ್ವಜಾರೋಹಣ ಬಳಿಕ ಶ್ರೀ ದೈವದ ನೇಮ ಪ್ರಾರಂಭವಾಗುವುದು. 

ಫೆ.19ಕ್ಕೆ ಬೆಳಿಗ್ಗೆ 9ಕ್ಕೆ ನಾಗದೇವರಿಗೆ ಕಲಶಾಭಿಷೇಕ, ನಾಗತಂಬಿಲ, ಸಂಜೆ ಗಂಟೆ 6ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಗಂಟೆ 9ಕ್ಕೆ ಬಲಿ ಉತ್ಸವ, 10ಕ್ಕೆ ಶ್ರೀ ಕೊಡಮಣಿತ್ತಾಯ ಮತ್ತು ಶ್ರೀ ಕುಕ್ಕಿನಂತ್ತಾಯ ದೈವಗಳ ನೇಮ ಜರಗಲಿದೆ. 

ಫೆ.20ಕ್ಕೆ ರಾತ್ರಿ ಗಂಟೆ 9ಕ್ಕೆ ಬ್ರಹ್ಮಶ್ರೀ ಬೈದರ್ಕಳ ನೇಮ, 10ಕ್ಕೆ  ಬಲಿ ಉತ್ಸವ ರಾತ್ರಿ ಗಂಟೆ 12 ರಿಂದ ಶ್ರೀ ಮಾಯಂದಲೆ ದೇವಿಯ ನೇಮ ನಡೆಯಲಿದೆ. 

ಫೆ.21ಕ್ಕೆ ಬೆಳಿಗ್ಗೆ ಗಂಟೆ 6ಕ್ಕೆ ಧ್ವಜಾರೋಹಣ, 7ಕ್ಕೆ ಕುರುಸಂಬಿಲ ನೇಮ ನಡೆಯಲಿದೆ ಎಂದು ಶ್ರೀ ನಡ್ಯೋಡಿ ದೈವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article