ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅನಿಮಲ್ ಬರ್ತ್ ಕಂಟ್ರೋಲ್ ರೂಲ್ಸ್–2023
Friday, February 20, 2026
ಮೂಡುಬಿದಿರೆ: ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅನಿಮಲ್ ಬರ್ತ್ ಕಂಟ್ರೋಲ್ ರೂಲ್ಸ್–2023 ಅನ್ವಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದ್ದಾರೆ.
ಮಂಗಳೂರು ಮೂಲದ “ಅನಿಮಲ್ ಕೇರ್ ಟ್ರಸ್ಟ್” ಸಂಸ್ಥೆಯ ಸಹಯೋಗದಲ್ಲಿ ಫೆಬ್ರವರಿ 20 ರಂದು ಪ್ರಾರಂಭಿಸುತ್ತಾರೆ. ಮುಂದಿನ ವಾರದಿಂದ ಪ್ರತೀ ಶನಿವಾರ ಬೀದಿ ನಾಯಿಗಳನ್ನು ಹಿಡಿಯುತಿದ್ದು, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಹಾಗೂ ಲಸಿಕೆ ಕಾರ್ಯ ನಡೆಯಲಿದೆ.
ಸಾರ್ವಜನಿಕರು ಈ ದಿನಗಳಲ್ಲಿ ತಮ್ಮ ಮನೆಯ ಸಾಕು ನಾಯಿಗಳನ್ನು ಮನೆಯ ಒಳಗೆ ಕಟ್ಟಿಹಾಕಿ ಪುರಸಭೆಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಕುರಿತಂತೆ ಪುರಸಭೆ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದ್ದು, ನಾಗರಿಕರು ಅಗತ್ಯ ಸಹಕಾರ ನೀಡುವಂತೆ ವಿನಂತಿಸಲಾಗಿದೆ.