ಉದ್ಯಮಿ ವಿಠಲ್ ಪ್ರಭು ನಿಧನ

ಉದ್ಯಮಿ ವಿಠಲ್ ಪ್ರಭು ನಿಧನ


ಮೂಡುಬಿದಿರೆ: ಇಲ್ಲಿನ ಪ್ರಸಿದ್ಧ ಲಕ್ಷ್ಮಿ ಲಂಚ್ ಹೋಂನ ಪಾಲುದಾರರಾಗಿದ್ದ ಹಾಗೂ ಉದ್ಯಮಿ ವಿಠಲ್ ಪ್ರಭು (56) ಅವರು ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಇವರು ಲಕ್ಷ್ಮಿ ಲಂಚ್ ಹೋಂನ ಮಾಲಕರಾಗಿದ್ದ ದಿ. ಕೃಷ್ಣರಾಯ ಪ್ರಭು ಮತ್ತು ಶಾಂತಾ ಪ್ರಭು ದಂಪತಿಯ ಕಿರಿಯ ಪುತ್ರ. ಮಹಾವೀರ ಕಾಲೇಜಿನಲ್ಲಿ ಪದವಿ ಪಡೆದಿದ್ದ ವಿಠಲ್ ಪ್ರಭು, ಈ ಹಿಂದೆ ಲಕ್ಷ್ಮಿ ಲಂಚ್ ಹೋಂ ಹೋಟೆಲ್‌ನ್ನು ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.

ಮೂಡುಬಿದಿರೆಯ ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಅವರು, ದೇವಸ್ಥಾನದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಯಕ್ಷಸಂಗಮ ಮೂಡುಬಿದಿರೆಯ ಮಾಜಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.

ಅವರ ಅಂತ್ಯಕ್ರಿಯೆಯು ಬುಧವಾರ ಬೆಳಗ್ಗೆ ಮೂಡುಬಿದಿರೆಯ ಮನೆಯಲ್ಲಿ ನೆರವೇರಿತು. ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಸ್ಥಾನದ ಮೊಕ್ತೇಸರರು, ಜಿ.ಎಸ್.ಬಿ. ಸಮಾಜದ ಮುಖ್ಯಸ್ಥರು ಹಾಗೂ ಮೂಡುಬಿದಿರೆಯ ಗಣ್ಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article