ಶ್ರೀ ಮಹಾವೀರ ಕಾಲೇಜಿನಲ್ಲಿ "ಸಂಶೋಧನಾ ಲೇಖನ ಬರವಣಿಗೆ ಕೌಶಲ್ಯ" ವಿಷಯದ ಕುರಿತು ವಿಶೇಷ ಉಪನ್ಯಾಸ
Monday, February 23, 2026
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಐಕ್ಯೂಎಸಿ ಮತ್ತು ಸಂಶೋಧನಾ ಘಟಕದ ವತಿಯಿಂದ ‘ಸಂಶೋಧನಾ ಲೇಖನ ಬರವಣಿಗೆ ಕೌಶಲ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಮಣಿಪಾಲ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, “ಸಂಶೋಧನಾ ಲೇಖನಗಳನ್ನು ಪರಿಣಾಮಕಾರಿಯಾಗಿ ಬರೆಯುವ ವಿಧಾನಗಳು, ಸಂಶೋಧನಾ ಚಿಂತನೆ, ಸಾರಲೇಖದ ರಚನೆ, ಉಲ್ಲೇಖಗಳನ್ನು ಬರೆಯುವ ವಿಧಾನ ಹಾಗೂ ಪ್ರಕಟಣ ಪ್ರಕ್ರಿಯೆಗಳ ಬಗ್ಗೆ ವಿವರವಾಗಿ ತಿಳಿಸಿದ ಅವರು ಉತ್ತಮ ಸಂಶೋಧನಾ ಪ್ರಶ್ನೆ ರೂಪಿಸುವ ಮಹತ್ವ ಮತ್ತು ವಿದ್ಯಾರ್ಥಿಗಳು ಈ ರೀತಿಯ ಬರವಣಿಗೆಯನ್ನು ಕೈಗೊಳ್ಳುವುದರ ಅಗತ್ಯವನ್ನು” ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಐಕ್ಯೂಎಸಿ ಸಂಚಾಲಕ ಪ್ರೊ. ಹರೀಶ್, ಸಂಶೋಧನಾ ಘಟಕದ ಸಂಯೋಜಕ ಡಾ. ಹರೀಶ್ ಹೆಚ್, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಸಂಶೋಧನ ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ವೈಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿ.ಎಸ್ಸಿ. ವಿದ್ಯಾರ್ಥಿನಿ ಕೀರ್ತಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.