ಮೂಡುಬಿದಿರೆ: ಸುರೇಶ್ ಅಂಚನ್, ವಿಲ್ಫ್ರೆಡ್ ಪಿಂಟೋ ಅವರಿಗೆ 'ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ

ಮೂಡುಬಿದಿರೆ: ಸುರೇಶ್ ಅಂಚನ್, ವಿಲ್ಫ್ರೆಡ್ ಪಿಂಟೋ ಅವರಿಗೆ 'ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ


ಮೂಡುಬಿದಿರೆ: ತಾಲೂಕಿನ ಶಿರ್ತಾಡಿಯ ಕರಾವಳಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಇತ್ತೀಚೆಗೆ ನಡೆದ ಹದಿಮೂರನೇ ವರ್ಷದ ಯಕ್ಷಗಾನ ಬಯಲಾಟದಲ್ಲಿ ಸಮಾಜ ಸೇವಕರಾದ ಜಯಶ್ರೀ ಹೊಟೇಲ್ ಮಾಲಕ ಸುರೇಶ್ ಅಂಚನ್ ಹಾಗೂ ವಾಲ್ಪಾಡಿಯ ವಿಲ್ಫ್ರೆಡ್ ಪಿಂಟೋ ಅವರಿಗೆ 'ಕರಾವಳಿ ಸಮಾಜ ಸೇವಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಶಿರ್ತಾಡಿ ಸೊಸೈಟಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾಶಿಪಟ್ಣ ಸೊಸೈಟಿ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ., ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ರಿಕ್ಷಾ ಮಾಲಕ ವಿಶ್ವನಾಥ ಪೂಜಾರಿ , ವಿಶ್ವನಾಥ ಕೋಟ್ಯಾನ್ ಹನ್ನೇರು, ಕರಾವಳಿ ಫ್ರೆಂಡ್ಸ್ ಸಂಚಾಲಕ ಸಂದೀಪ್ ಸಾಲ್ಯಾನ್, ಅಧ್ಯಕ್ಷ ಪ್ರಸಾದ್ ಬೋರುಗುಡ್ಡೆ,ಕಾರ್ಯದರ್ಶಿ ಪ್ರಶಾಂತ್ ವಾಲ್ಪಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article