ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ  ಹೊಸ ಕೃತಿ ‘ಇನ್‌ಕ್ರೆಡಿಬಲ್ ಭಾರತ್: ವಿಷನ್ ಫಾರ್ ವಿಕ್ಷಿತ್ ಭಾರತ್’ ಪುಸ್ತಕ ಬಿಡುಗಡೆಗೆ ಸಿದ್ಧ

ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ ಹೊಸ ಕೃತಿ ‘ಇನ್‌ಕ್ರೆಡಿಬಲ್ ಭಾರತ್: ವಿಷನ್ ಫಾರ್ ವಿಕ್ಷಿತ್ ಭಾರತ್’ ಪುಸ್ತಕ ಬಿಡುಗಡೆಗೆ ಸಿದ್ಧ


ಮೂಡುಬಿದಿರೆ: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ತಮ್ಮ ಹೊಸ ಕೃತಿ ‘ಇನ್‌ಕ್ರೆಡಿಬಲ್ ಭಾರತ್: ವಿಷನ್ ಫಾರ್ ವಿಕ್ಷಿತ್ ಭಾರತ್’ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.

ರೆಶೆಲ್ ಫೆರ್ನಾಂಡಿಸ್ ಎಬಿವಿಪಿ ಸದಸ್ಯೆಯಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ. ಪ್ರಸ್ತುತ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದಾರೆ. ದೇಶಭಕ್ತಿ, ಸುಶಾಸನ ಮತ್ತು ಯುವಶಕ್ತಿಯ ಕುರಿತಾದ ವಿಚಾರಗಳನ್ನು ಆಳವಾಗಿ ಅಭಿವ್ಯಕ್ತಿಸುವಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ‘ಭಾರತ @2047 ರಲ್ಲಿ ಯುವಕರ ಪಾತ್ರ’ ಮತ್ತು ‘ಪ್ರಜಾಪ್ರಭುತ್ವದ ಸುರಾಜ್ಯ–ಉತ್ತಮ ಆಡಳಿತ ಚಕ್ರ’ ಸೇರಿವೆ.

“ವಸುಧೈವ ಕುಟುಂಬಕಂ” ಎಂಬ ಮಹೋನ್ನತ ಸಂದೇಶದ ಮೂಲಕ ಭಾರತವು ವಿಶ್ವಕ್ಕೆ ಏಕತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಾರುತ್ತಿರುವ ಹಿನ್ನೆಲೆಯಲ್ಲೇ ಈ ಕೃತಿ ಬಿಡುಗಡೆಯಾಗುತ್ತಿದೆ. ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ಪರಂಪರೆಯ ನಡುವೆಯೂ ಏಕತೆಯ ಮಹತ್ವವನ್ನು ಒತ್ತಿ ಹೇಳುವ ಈ ಪುಸ್ತಕವು ವಿಕ್ಷಿತ್ ಭಾರತ ನಿರ್ಮಾಣದ ದಿಸೆಯಲ್ಲಿ ಯುವಜನತೆಗೆ ಪ್ರೇರಣೆಯಾಗಿ ಪರಿಣಮಿಸಲಿದೆ ಎಂದು ಹೇಳಲಾಗಿದೆ.

ರೆಶೆಲ್ ಅವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಇತ್ತೀಚೆಗೆ ಅವರು ಭಾರತ ಮಂಟಪದಲ್ಲಿ 2025ರಲ್ಲಿ ನಡೆದ ಸಮಾರಂಭದಲ್ಲಿ ದೇಶರತ್ನ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತೀಯ ಕ್ಯಾಥೋಲಿಕ್ ಪತ್ರಿಕಾ ಸಂಘದಿಂದ ಪ್ರದಾನವಾಗುವ ಜೆ. ಮೌರಸ್ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article