ಮಹಾಶಿವರಾತ್ರಿ: ಕರಿಂಜೆ ಅನಂತಾಸನ ಮಠದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮಗಳು

ಮಹಾಶಿವರಾತ್ರಿ: ಕರಿಂಜೆ ಅನಂತಾಸನ ಮಠದಲ್ಲಿ ವಿವಿಧ ಧಾಮಿ೯ಕ ಕಾಯ೯ಕ್ರಮಗಳು


ಮೂಡುಬಿದಿರೆ: ಮಹಾಶಿವರಾತ್ರಿ ಪ್ರಯುಕ್ತ ಕರಿಂಜೆಯ ಶ್ರೀ ಕ್ಷೇತ್ರ ಅನಂತಾಸನ ಮಠ (ಗುಡ್ಡೆ ಮಠ)ದಲ್ಲಿ ಭಾನುವಾರ  ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.


ಶಿವರಾತ್ರಿ ಅಂಗವಾಗಿ  ಇರುವೈಲ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಭಜನೆ ಸಲ್ಲಿಸಲಾಯಿತು. ನಂತರ ಕರಿಂಜೆ ಹತ್ತು ಸಮಸ್ತರಿಂದ ಭಜನಾ ಸೇವೆ ನಡೆಯಿತು. ಕಜೆಪದವು ಧರ್ಮಶಾಸ್ತ ಅಯ್ಯಪ್ಪ ಭಜನಾ ಮಂಡಳಿಯಿಂದ ಭಕ್ತಿಗೀತೆಗಳು ಮೊಳಗಿದವು. ಬಳಿಕ ಮಹಾಪೂಜೆ ವೈಭವದಿಂದ ನೆರವೇರಿತು. 


ಕ್ಷೇತ್ರದ ಆನುವಂಶಿಕ ಮೊಕ್ತೇಸರ ಪ್ರಸನ್ನ ಭಟ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article