ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ‘ಚಿನ್ನು ಪಾಪು’ ಆಪ್ತ ಸ್ನೇಹಿತನೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Sunday, February 15, 2026
ಕಾಸರಗೋಡು: ಸಾಮಾಜಿಕ ಮಾಧ್ಯಮ ಪ್ರಭಾವಿ ಚಿನ್ನು ಪಾಪು ಎಂದು ಜನಪ್ರಿಯರಾಗಿದ್ದ ರೇಷ್ಮಾ ಕೆ. ಅವರ ಸಾವಿನ ಕೆಲವೇ ದಿನಗಳ ಬಳಿಕ ಅವರ ಆಪ್ತ ಸ್ನೇಹಿತ ಸಂದೇಶ್ ಕೆ. ಕಾಸರಗೋಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಮನ್ನಿಪಾಡಿಯಲ್ಲಿರುವ ತಮ್ಮ ನಿವಾಸದ ಕೋಣೆಯಲ್ಲಿ ಸಂದೇಶ್ ಕೆ. ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಕಾಸರಗೋಡು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.