ಕುಮ್ಕಿ ಕಾಯ್ದೆಯ ವಿರುದ್ಧ ಹೋರಾಟ: ಶಾಂತಿ ಪ್ರಸಾದ್ ಹೆಗ್ಡೆ

ಕುಮ್ಕಿ ಕಾಯ್ದೆಯ ವಿರುದ್ಧ ಹೋರಾಟ: ಶಾಂತಿ ಪ್ರಸಾದ್ ಹೆಗ್ಡೆ


ಮೂಡುಬಿದಿರೆ: ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕುಮ್ಕಿ ಕಾಯ್ದೆಯ ವಿರುದ್ಧ ರೈತರು ಹೋರಾಟ ನಡೆಸುವ   ಅಗತ್ಯತೆಯಿದೆ ಎಂದು ವಕೀಲ ಶಾಂತಿಪ್ರಸಾದ್ ಹೆಗ್ಡೆ ಕರೆ ನೀಡಿದರು. 

ಅವರು ಭಾರತೀಯ ಕಿಸಾನ್ ಸಂಘ ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಸಮಿತಿಯ ವತಿಯಿಂದ ಇರುವೈಲು ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ 'ಕಿಸಾನ್ ಗ್ರಾಮ ಜಾಗೃತಿ- ಮಾಹಿತಿ ಕಾಯ೯ಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 


ಸೂರ್ಯ ಘರ್ ಯೋಜನೆಯ ಸೌಲಭ್ಯವನ್ನು ಪಡೆಯಲು ಗ್ರಾಮದ 45 ಜನ ರೈತರು ಹೆಸರು ನೋಂದಾಯಿಸಿರುವ ಬಗ್ಗೆ ಅವರು ಮಾಹಿತಿ ನೀಡಿದ್ದು ಇದಕ್ಕೆ ಸಭೆ ಸರ್ವಾನುಮತದಿಂದ  ಒಪ್ಪಿಗೆಯನ್ನು ಸೂಚಿಸಿತು.

ಹಿರಿಯ ಕೃಷಿಕರಾದ ಜಿನ್ನಪ್ಪ ನಾಯ್ಕ್ ಕಟ್ಟಣಿಗೆ  ಕಾಯಾ೯ಗಾರವನ್ನು ಉದ್ಘಾಟಿಸಿದರು.

ರಾಜೇಶ್ ಕಾಳೂರು ಅಧ್ಯಕ್ಷತೆ ವಹಿಸಿದ್ದರು.

ಸೆಲ್ಕೋ ಸೋಲಾರ್ ಲೈಟ್ ನ ಹಿರಿಯ ಪ್ರಬಂಧಕ ಪ್ರವೀಣ್ ಬಂಗೇರ ಅವರು ಸೂಯ೯ಘರ್ ಯೋಜನೆ ಹಾಗೂ ಕುಸುಮ ಯೋಜನೆಯ ಕುರಿತು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿದೇ೯ಶಕ ಪ್ರವೀಣ್ ಕೆ  ಇಲಾಖೆ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಶೆಟ್ಟಿ, ಇರುವೈಲು ಗ್ರಾ. ಪಂ.ನ ಮಾಜಿ ಸದಸ್ಯ ವಲೇರಿಯನ್ ಕುಟಿನ್ಹ, ರವಿರಾಜ್ ಪುತ್ತೂರು, ಪ್ರವೀಣ್ ಭಂಡಾರಿ, ಚಿಕ್ಕಯ್ಯ ಪೂಜಾರಿ ಮತ್ತು ಪ್ರವೀಣ್ ಶೆಟ್ಟಿ ಕುತ್ಯಾಡಿ, ದಿನೇಶ್ ಶೆಟ್ಟಿ, ಪದ್ಮನಾಭ ಪ್ರಭು, ಶಂಕರ್ ಶೆಟ್ಟಿ ಬಕೆ೯, ಸುಬ್ರಹ್ಮಣ್ಯ ವಕ೯ಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article