ಬೈಕ್ ಗೆ ಲಾರಿ ಢಿಕ್ಕಿ: ನವ ವಿವಾಹಿತ ಸಾವು
Saturday, February 28, 2026
ಮೂಡುಬಿದಿರೆ: ಶನಿವಾರ ನಿಡ್ಡೋಡಿ ಗ್ರಾಮದ ಕಾನ ಪ್ರದೇಶದಲ್ಲಿ ಬೈಕ್ ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ನವ ವಿವಾಹಿತ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ದುಘ೯ಟನೆ ನಡೆದಿದೆ.
ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸಂತೆಕಟ್ಟೆ ನಿವಾಸಿ ರಕ್ಷಿತ್ ಕುಮಾರ್ (30) ಮೃತಪಟ್ಟವರು.
ಇವರು ಮೂಲ್ಕಿಯಲ್ಲಿರುವ ಪತ್ನಿಯ ಮನೆಗೆ ಬಂದಿದ್ದು, ಶನಿವಾರ ಬೆಳಿಗ್ಗೆ ಕಾರ್ಯನಿಮಿತ್ತ ಗಂಜಿಮಠದ ಕಂಪೆನಿಯೊಂದಕ್ಕೆ ತೆರಳುತ್ತಿದ್ದರು.
ಕಾನ ಬಳಿ ದನ ಅಡ್ಡ ಬಂದ ಹಿನ್ನೆಲೆಯಲ್ಲಿ ಡಿಕ್ಕಿ ತಪ್ಪಿಸಲು ಬೈಕ್‌ನ್ನು ಬಲಕ್ಕೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಲಾರಿ ಬೈಕ್ ಸಹಿತ ಸವಾರನನ್ನು ಕೆಲವು ಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇವರಿಗೆ ಎರಡು ತಿಂಗಳ ಹಿಂದೆ ವಿವಾಹವಾಗಿತ್ತು.