ಮುಂದೊಂದು ದಿನ ಕೃಷಿಕ ಭತ್ತ, ಕೃಷಿಯ ರೇಟನ್ನು ಆನ್ ಲೈನ್ ಮೂಲಕ ನೋಡುವಂತ್ತಾಗಬೇಕು

ಮುಂದೊಂದು ದಿನ ಕೃಷಿಕ ಭತ್ತ, ಕೃಷಿಯ ರೇಟನ್ನು ಆನ್ ಲೈನ್ ಮೂಲಕ ನೋಡುವಂತ್ತಾಗಬೇಕು


ಮೂಡುಬಿದಿರೆ: ಯುವಜನತೆ ಇಂದು ಚಿನ್ನದ ರೇಟನ್ನು ಮೊಬೈಲ್ ಮೂಲಕ ಹುಡುಕುವಂತೆಯೇ ಮುಂದೊಂದು ದಿನ ಕೃಷಿಕ ಭತ್ತ, ಕೃಷಿಯ ರೇಟನ್ನು ಆನ್ ಲೈನ್ ಮೂಲಕ ನೋಡುವಂತ್ತಾಗಬೇಕು ಎಂದು ಪೆರ್ವಾಜೆ ಪಿಎಂ ಶ್ರೀ ಪ್ರಭಾರ ಮುಖ್ಯಶಿಕ್ಷಕಿ ಅಸ್ಮಾ ಅಭಿಪ್ರಾಯಪಟ್ಟರು.

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕೃಷಿ ಬದುಕು ವಿಚಾರವಾಗಿ ಮಾತನಾಡಿದರು.

ಮಣ್ಣು ಸಂರಕ್ಷಿಸಿ, ಮಣ್ಣು ಉಸಿರಾಡಲು ಅವಕಾಶ ಕೊಡಿ. ಅದರ ಜೀವಚೈತನ್ಯ ಶ್ರೇಷ್ಠವಾದುದು ಎಂದರು.

ಇಂದು ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದ ಅವರು ಭೂಮಿ ತಾಯಿ ಎಂಬ ಗೌರವ ಮರೆತು ಬಿಟ್ಟರೆ ಭತ್ತದ ತಳಿಯ ಗೌರವ ಉಳಿಸಲು ಸಾಧ್ಯವಿಲ್ಲ. ಮಕ್ಕಳಲ್ಲಿ ಭತ್ತ, ಕೃಷಿಯ ಪ್ರೀತಿ ಬೆಳೆಸಬೇಕು. ಅವಾಗ ಭವಿಷ್ಯ ಸಂಪನ್ನತೆ ಕಾಣಲು ಸಾಧ್ಯ ಎಂದರು.

ಸಮ್ಮೇಳನಾಧ್ಯಕ್ಷರಾದ ಅಬ್ದುಲ್ ಹಮೀದ್ ಪಕ್ಕಲಡ್ಕ, ಆಳ್ವಾಸ್ ಹೋಮಿಯೋಪತಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ರೋಶನ್ ಪಿಂಟೋ, ಹಿರಿಯ ಸಾಹಿತಿ ಜಯಂತಿ ಬಂಗೇರ, ಚೇತನ ರಾಜೇಂದ್ರ ಹೆಗ್ಡೆ, ಉಳ್ಳಾಲ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಧನಂಜಯ್ ಕುಂಬ್ಳೆ ವೇದಿಕೆಯಲ್ಲಿದ್ದರು.

ಅನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article